ಇಂಡಿ : ಬಿಜೆಪಿಯ ಭ್ರಷ್ಟಾಚಾರ, ದುರಾಡಳತಿ, ಬೆಲೆ ಏರಿಕೆಯಿಂದಾಗಿ ಸಾಮನ್ಯ ಜನರು ಬೇಸತ್ತು ತತ್ತರಿಸಿ ಹೋಗಿದ್ದಾರೆ.ದೆಹಲಿಯಲ್ಲಿ ಎಲ್ ಕೆ ಅಡ್ವಾಣಿ ರಾಜ್ಯದಲ್ಲಿ ಬಿ ಎಸ್ ಯಡಿಯೂರಪ್ಪ ಅವರನ್ನು ಮೂಲೆ ಗುಂಪು ಮಾಡಿದ್ದಾರೆ. ಎಮ್ ಐ ಎಮ್ ಕೆಲವು ಮತ ಕಟ್ ಮಾಡುವುದಾದರೆ ಇನ್ನೊಂದು ಪಕ್ಷ ಯಾವ ಲೆಕ್ಕಕೂ ಬರಲ್ಲ. ಆ ಪಕ್ಷದ ಕುಟುಂಬದಲ್ಲಿ ಪ್ರತಿ ದಿನ ಟಿಕೆಟಗಾಗಿ ಜಗಳ ನಡದೈತಿ. ಇನ್ನೂ ಸ್ವಲ್ಪ ದಿನಗಳಲ್ಲಿ ಆ ಪಕ್ಷದಿಂದ ಹೊರಗೆ ಬರುವ ಸಂಖ್ಯೆ ಹೆಚ್ಚು ಇದೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಲೆ, ಗೆಲ್ಲೊದು ಪಕ್ಕಾ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಬುಧವಾರ, ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮನೆ ಮನೆಗೂ ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೊರೊನಾದ ಸಂಕಷ್ಟ,ಗ್ಯಾಸ, ಪೆಟ್ರೊಲ್ ಇನ್ನೂ ಅನೇಕ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರು ಜೀವನ ಸಂಕಷ್ಟದಲ್ಲಿದೆ. ಸದೃಡ ಸುರಕ್ಷಿತ ಕುಟುಂಬಕ್ಕಾಗಿ ಗೃಹಲಕ್ಷ್ಮೀ, ಗ್ರಹಜ್ಯೋತಿ ಯೋಜನೆ ರೂಪಿಸಲಾಗಿದೆ. ಬಡವರಿಗೆ ಬಗ್ಗೆ ಕಾಳಜಿ ಚಿಂತನೆ ಇರುವ ಪಕ್ಷ ಮಾತ್ರ ಇಂತಹ ಯೋಜನೆಗಳು ತರಲು ಸಾಧ್ಯ ಎಂದು ಹೇಳಿದರು. ಈ ಹಿಂದೆ ನೀಡಿದ 165 ಭರವಸೆಯಲ್ಲಿ 159 ಭರವಸೆಗಳು ಕಾಂಗ್ರೆಸ್ ಪಕ್ಷ ಪೂರೈಸಿದೆ. ಅನೇಕ ಜನಪ್ರಿಯ ಯೋಜನೆಗಳು ಕಾಂಗ್ರೆಸ್ ಸರಕಾರ ಕೊಟ್ಟಿದೆ. ಇನ್ನೂ ಈ ಬಾರಿ 2 ಲಕ್ಷ ಕೋಟಿ ನೀರಾವರಿ ಯೋಜನೆಗೆ, 200 ಯುನಿಟ್ ವಿದ್ಯುತ್, 10 ಕೆಜಿ ಅಕ್ಕಿ ಬಡವರಿಗೆ ಉಚಿತವಾಗಿ ಕೊಡುವ ಅನೇಕ ಭರವಸೆಯ ಯೋಜನೆಗಳು ಸಾವಿರಾರು ಕುಟುಂಬಕ್ಕೆ ಆಧಾರವಾಗುತ್ತೆವೆ ಎಂದು ಹೇಳಿದರು.
ಅದಲ್ಲದೇ ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯತ್ ಮತ್ತು ಪ್ರತಿ ಪ್ರತಿ ಮನೆ ಮನೆಗೆ ಈ ಯೋಜನೆ ಬಗ್ಗೆ ಜಾಗೃತಿ ಮೂಡಿಸಬೇಕು. ಪಕ್ಷದ ಕಾರ್ಯಕರ್ತರೆ ಪಕ್ಷದ ಜೀವಾಳ. ಪಕ್ಷದಲ್ಲಿ ಕೇವಲ ಒಂದು ಸಮುದಾಯ ಇದ್ರೆ ಸಾಲದು, ಎಲ್ಲಾ ವರ್ಗ, ಸಮುದಾಯ, ಧರ್ಮ ಮತ್ತು ಎಲ್ಲಾ ಗ್ರಾಮದವರು ಇದ್ದಾಗ ಮಾತ್ರ ಪಕ್ಷ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕೊಟ್ಟ ಎಲ್ಲಾ ಭರವಸೆಗಳು ಪೂರೈಸುತ್ತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಳ್ಳೊಳ್ಳಿ ಮತ್ತು ಇಂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಲನಗೌಡ ಬಿರಾದರ,ಜಾವೀದ ಮೊಮಿನ, ಕೆಪಿಸಿಸಿ ಸದಸ್ಯ ಮಲ್ಲನಗೌಡ ಪಾಟೀಲ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಇಲಿಯಾಸ್ ಬೊರಾಮಣಿ, ಪುರಸಭೆ ಮಾಜಿ ಅಧ್ಯಕ್ಷ ಶ್ರೀಕಾಂತ್ ಕುಡಿಗನೂರ, ಯಮುನಾಜಿ ಸಾಳೆಂಕೆ, ಜೆಟ್ಟಪ್ಪ ರವಳಿ, ಮುತ್ತಪ್ಪ ಪೊತೆ, ಪಾಪು ಕಿತ್ತಲಿ, ಭೀಮಾಶಂಕರ ಮೂರಮನ, ಶೇಖು ಸಾಹುಕಾರ್ ರೂಗಿ, ಸತ್ತಾರ ಬಾಗವಾನ, ರಾಜು ಕುಲಕರ್ಣಿ, ಪ್ರಶಾಂತ ಕಾಳೆ, ಶೇಖರ ಶಿವಶರಣ , ರೈಸ್ ಅಷ್ಟೆಕರ ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು.