ಇಂಡಿ : ಅತ್ಯಂತ ಹಿಂದುಳಿದಿರುವ ಮಹಾ ಗಡಿ ಭಾಗದಲ್ಲಿರುವ ಇಂಡಿ ಪಟ್ಟಣದಲ್ಲಿ ತಾಯಿ ಮಗುವಿನ ಆಸ್ಪತ್ರೆ ಇಲ್ಲದಿರುವ ಬಗ್ಗೆ ಸರಕಾರದ ಗಮನಕ್ಕೆ ಬಂದದಿಯೇ ಎಂದು ಕಲಾಪದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಪ್ರಶ್ನೆ ಮಾಡಿದರು.
ಈ ಸಂದರ್ಭದಲ್ಲಿ ಉತ್ತರಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದಿಕೀಯ ಸಚಿವರು, ಇಂಡಿ ಪಟ್ಟಣದಲ್ಲಿ ಪ್ರತ್ಯೇಕ ತಾಯಿ ಮಕ್ಕಳ ಆಸ್ಪತ್ರೆ ಇರುವುದಿಲ್ಲ. ಆದರೆ 100 ಹಾಸಿಗೆಯ ತಾಲ್ಲೂಕು ಮಟ್ಟದ ಸಾರ್ವಜನಿಕ ಆಸ್ಪತ್ರೆಯು ಕಾರ್ಯ ನಿರ್ವಹಿಸುತ್ತಿದೆ. ಈ ಆಸ್ಪತ್ರೆಯಲ್ಲಿ ಪ್ರಸ್ತುತ ಗರ್ಭಿಣಿ ಆರೈಕೆ, ಪ್ರಸೂತಿ ಆರೈಕೆ ನವಜಾತ ಶಿಶು ಮಕ್ಕಳ ಆರೈಕೆ ಮತ್ತು ಇನ್ನಿತರ ವಿಭಾಗಗಳ ಸೇವೆ ಲಭ್ಯವಿರುತ್ತದೆ.
ಇನ್ನೂ ಯಾವುದೇ ತಾಲೂಕು ಆಸ್ಪತ್ರೆಯಲ್ಲಿ 35MCH ಹಾಸಿಗೆಗಳಿಗೆ ಪ್ರತ್ಯೇಕ MCH ಮಂಜೂರು ಮಾಡಲು ಒಟ್ಟು ಮಾಹೆವಾರು ಹೆರಿಗೆ ಪ್ರಮಾಣವು ಕನಿಷ್ಠ 210 ಅದಲ್ಲದೇ 184 ರಷ್ಟು ಸಹಜ ಹೆರಿಗೆಗಳು ಮತ್ತು 26 ರಷ್ಟು ಸಿಜೇರಿಯನ್ ಹೆರಿಗೆಗಳು ಸಂಭವಿಸಬೇಕಾಗಿರುತ್ತದೆ. ಆದರೆ ಇಂಡಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ 3 ವರ್ಷಗಳಿಂದ ಮಾಹೆವಾರು ಸರಾಸರಿ ಹೆರಿಗೆಗಳು 131 ಸಂಭವಿಸುತ್ತಿದ್ದು ಮತ್ತು ಸಿಜೇರಿಯನ್ ಹೆರಿಗೆಗಳು ಸಂಭವಿಸುತ್ತಿಲ್ಲ. ಕಳೆದ 3 ವರ್ಷಗಳ ಸರಾಸರಿ ಬೆಡ್ ಅಕ್ಯುಪೆನ್ಸಿ ರೆಟ್ 37 ರಷ್ಟು ಇರುವುದರಿಂದ ಭಾರತ ಸರಕಾರದ ಮಾನದಂಡಗಳ ಅನ್ವಯ ಪ್ರತ್ಯೇಕ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಮಂಜೂರು ಮಾಡಲು ಕನಿಷ್ಠ 70 ಕ್ಕಿಂತ ಹೆಚ್ಚಿಗೆ ಇರಬೇಕಾಗಿದ್ದು, ನಿಯಮಾನುಸಾರ MCH ಮಂಜೂರು ಮಾಡಲು ಅವಕಾಶ ಇರುವುದಿಲ್ಲ ಎಂದು ಉತ್ತರಿಸಿದರು.