ಇಂಡಿ : ಪಟ್ಟಣದ ಬಹು ನಿರೀಕ್ಷಿತ ಮೆಗಾ ಮಾರ್ಕೆಟ್ ಫೆ.2 ರಂದು ಶಾಸಕ ಯಶವಂತರಾಯಗೌಡ ಪಾಟೀಲ ಉದ್ಘಾಟಿಸಿಲ್ಲಿದ್ದಾರೆ. ಶಾಶ್ವತ ಕುಡಿಯುವ ನೀರು, ಮೆಗಾ ಮಾರ್ಕೆಟ್ ಮೊದಲ ಹಂತದ ಉದ್ಘಾಟಿನೆ ಹಾಗೂ 2 ನೇ ಹಂತದ ಕಾಮಗಾರಿ ಪೂಜೆ ಸಲ್ಲಿಸುತ್ತಾರೆ. ಹಾಗೆ ನಗರೋತ್ಥಾನ ಅಡಿಯಲ್ಲಿ ವಿವಿಧ ಕಾಮಗಾರಿಗಳು, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿ ಪ್ರತಿಷ್ಠಾಪನ ಅಡಿಗಲ್ಲು ಮತ್ತು ನಗರದ ಮೆಟ್ರಿಕ್ ಪೂರ್ವ ವಸತಿ ನಿಲಯಗಳ ನೂತನ ಕಟ್ಟಡ ಅಡಿಗಲ್ಲು ಸಮಾರಂಭ ನೆರೆವರಿಸಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಶಾಸಕರ ಜನಸಂಪರ್ಕ ಕಛೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.