ಇಂಡಿ : ಜಮೀನಿನ ಪಕ್ಕದಲ್ಲಿ ಹೋಗುವಾಗ ಹಾವು ಕಚ್ಚಿದ ಪರಿಣಾಮ 10 ವರ್ಷದ ಬಾಲಕ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಡಲಸಂಗ ಎಲ್‌ಟಿ ನಂಬರ 6ರಲ್ಲಿ ಗುರುವಾರ ನಡೆದಿದೆ. 10 ವರ್ಷದ ಪ್ರೇಮ ಉಮೇಶ ಜಾಧವ್ ಮೃತಪಟ್ಟಿರುವ ಬಾಲಕ. ಜಮೀನಿನ ಪಕ್ಕದಲ್ಲಿರುವ ಹಳ್ಳದಲ್ಲಿ ಹೋದಾಗ ಪ್ರೇಮಗೆ ವಿಷಪೂರಿತ ಹಾವು ಕಚ್ಚಿದೆ. ಇದರ ಪರಿಣಾಮವಾಗಿ ಅಸುನೀಗಿದ್ದಾನೆ. ಹೋರ್ತಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.


















