ಲಿಂಗಸೂಗೂರು: ಪಂಚರತ್ನ ರಥಯಾತ್ರೆಗೆ ಆಗಮಿಸಿದ ಮಾಜಿ ಸಿ.ಎಂ. ಹೆಚ್.ಡಿ. ಕುಮಾರಸ್ವಾಮಿ ಯವರಿಗೆ ಮುದಗಲ್ ತಾಲೂಕಾ ಕೇಂದ್ರ ಮಾಡಲು ಕರವೇ ಕಾರ್ಯಕರ್ಯರು ಮನವಿ ಮಾಡಿದರು.
ಐತಿಹಾಸಿಕ ಮುದಗಲ್ ಪಟ್ಟಣ ಭೌತಿಕವಾಗಿ ಹಾಗೂ ಆರ್ಥಿಕವಾಗಿ ತಾಲೂಕಾ ಕೇಂದ್ರವಾಗಲು ಎಲ್ಲಾ ಅರ್ಹತೆ ಹೊಂದಿದೆ. ಪುರಸಭೆ ಸೇರಿದಂತೆ 9 ಗ್ರಾ.ಪಂ. 100 ಹಾಸಿಗೆಯುಳ್ಳ ಸಮುದಾಯ ಆರೋಗ್ಯ ಕೇಂದ್ರ, ಎ.ಪಿ.ಎಂ.ಸಿ. ಹಾಗೂ ನಾನಾ ಕಾಲೇಜುಗಳನ್ನು ಒಳಗೊಂಡಿದೆ.
ಅಲ್ಲದೆ ಮುದಗಲ್ ಪಟ್ಟಣದಲ್ಲಿ 23 ವಾರ್ಡುಗಳಿದ್ದು, 40 ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಇನ್ನು ಗ್ರಾನೈಟ್ ಕ್ವಾರಿಗಳು, 57 ಕಂದಾಯ ಗ್ರಾಮಗಳು, 18 ತಾಂಡಾಗಳು ಸೇರಿ 36 ಕಿ.ಮೀ. ದೂರದ ಹಳ್ಳಿಗಳ ಜನರಿಗೆ ವ್ಯಾಪಾರ ವಹಿವಾಟು ಮಾಡಲು ಅನುಕೂಲಕರವಾಗಿದೆ. ಮುದಗಲ್ ಪಟ್ಟಣವನ್ನು ತಾಲೂಕಾ ಕೇಂದ್ರ ಮಾಡಲು ಅನೇಕ ಸಮಿತಿಗಳು ರಚನೆಗೊಂಡು ಹೋರಾಟಗಳು ನಡೆದಿವೆ. ಆದರೆ ರಾಜಕೀಯ ಇಚ್ಚಾ ಸಕ್ತಿ ಕೊರತೆಯಿಂದ ತಾಲೂಕಾ ಕೇಂದ್ರದಿಂದ ವಂಚನೆಗೆ ಒಳಗಾಗಿದೆ.
ತಾವು ಅಧಿಕಾರಕ್ಕೆ ಬಂದರೆ ಮುದಗಲನ್ನು ತಾಲೂಕು ಕೇಂದ್ರ ಎಂದು ಘೋಷಿಸಬೇಕು ಎಂದು ಕರವೆ ಅಧ್ಯಕ್ಷ ಎಸ್.ಎ. ನಯಿಮ್ ನೇತೃತ್ವದಲ್ಲಿ ಕಾರ್ಯಕರ್ತರು ಹೆಚ್.ಡಿ. ಕುಮಾರಸ್ವಾಮಿ ಯವರಿಗೆ ಮನವಿ ಸಲ್ಲಿಸಿದರು.