ಕ್ಷತ್ರಿಯರ ನಡೆ ರಾಜಧಾನಿ ಕಡೆ : ರಾಮಸಿಂಗ್ ಕನ್ನೊಳ್ಳಿ..!
ಇಂಡಿ : ಕರ್ನಾಟಕ ಕ್ಷತ್ರಿಯ ಒಕ್ಕೂಟದ ಅಡಿಯಲ್ಲಿ, ಕ್ಷತ್ರಿಯರ ನಡೆ ರಾಜಧಾನಿ ಕಡೆ ಎಂಬ ನುಡಿಯಲ್ಲಿ ರಾಜ್ಯಾಧ್ಯಕ್ಷ ಉದಯಸಿಂಗ್ ನೇತೃತ್ವದಲ್ಲಿ ಬೃಹತ್ ಸಮಾವೇಶ ಜ.29 ರಂದು ಬೆಂಗಳೂರಿನ ಅರಮನೆಯ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಜಪೂತ ಸಮಾಜದ ತಾಲ್ಲೂಕು ಯುವ ಮುಖಂಡ ರಾಮಸಿಂಗ್ ಕನ್ನೊಳ್ಳಿ ಪತ್ರಿಕಾ ಪ್ರಕಟಣೆಗೆ ಮಾಹಿತಿ ನೀಡಿದರು.
ಕ್ಷತ್ರಿಯ ಒಳಪಂಗಡದ ಸುಮಾರು 36 ಸಮುದಾಯಗಳು ಒಂದು ವೇದಿಕೆಯ ಬೃಹತ್ ಸಮಾವೇಶ ಇದಾಗಿದೆ. ಈಗಾಗಲೇ 1.30 ಕೋಟಿ ಕ್ಷೇತ್ರಿಯೂ ಇರುವ ಜನರು ನಾವು ಕರ್ನಾಟಕದ ಉದ್ದಗಲಕ್ಕೂ ಚದುರಿಹೊಗಿದ್ದೆವೆ. ನಮ್ಮ ಸಮುದಾಯಕ್ಕೆ ಸಿಗಬೇಕಾದ ಸಾಮಾಜಿಕ , ಶೈಕ್ಷಣಿಕ, ಆರ್ಥಿಕ ಹಾಗೂ ಬಹುಮುಖ್ಯವಾಗಿ ರಾಜಕೀಯ ಪಡೆದುಕೊಳ್ಳಲು ಸಿದ್ದರಾಗಬೇಕಾಗಿದೆ. ಈ ಕಾರ್ಯಕ್ರಮಕ್ಕೆ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡ, ಪುರಸಭೆ ಮಾಜಿ ಅಧ್ಯಕ್ಷ ಯಮನಾಜಿ ಸಾಳುಂಕೆ, ಸಂಜು ರಾಠೋಡ, ಹುಚ್ಚಪ್ಪ ತಳವಾರ, ಮುರಳಿ ವಾಸ್ಟರ್, ಧರ್ಮು ಕ್ಷೇತ್ರಿ ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.