ಲಿಂಗಸುಗೂರು: ತಾಲೂಕಿನ ನಾಗರಹಾಳ ಗ್ರಾಮ ಪಂಚಾಯತಿಯಲ್ಲಿ ರೋಜಗಾರ ದಿವಸ, ಮಹಿಳಾ ಸಬಲಿಕರಣ ಅಭಿಯಾನ ಹಾಗೂ ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯಡಿಗೆ ಅಭಿಯಾನಗಳನ್ನು ಮಾಡಲಾಯಿತು.
ಈ ವೇಳೆ ತಾಲೂಕು ಐ. ಇ. ಸಿ. ಸಂಯೋಜಕರಾದ ಬಾಲಪ್ಪ ಮಾತನಾಡಿ ಪ್ರತಿ ಯೊಬ್ಬರು ನರೇಗಾ ಯೋಜನೆಯ ಸದುಪಯೋಗವನ್ನು ಪಡೆಯಬೇಕು. ನರೇಗಾ ಯೋಜನೆಯು ಕೃಷಿ ಇಲಾಖೆ, ತೋಟಗಾರಿಕೆ, ರೇಷ್ಮೆ ಮೀನುಗಾರಿಕೆ ಇಲಾಖೆಯಲ್ಲಿ ಸಹ ನರೇಗಾ ಯೋಜನೆಯಲ್ಲಿ ಸದುಪಯೋಗ ಪಡೆಯಬಹುದು. ಇನ್ನು ಮಹಿಳೆಯರು ಹೆಚ್ಚು ನರೇಗಾ ಯೋಜನೆ ಯಲ್ಲಿ ಭಾಗವಹಿಸಬೇಕು ಅದರ ಜೊತೆಗೆ ವಯಕ್ತಿಕ ಕಾಮಗಾರಿಯನ್ನು ಪಡೆದುಕೊಂಡು ಆರ್ಥಿಕವಾಗಿ ಸದೃಢ ರಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಭಿವೃಧ್ಧಿ ಅಧಿಕಾರಿ ಗೌರಮ್ಮ, ಗಂಗಯ್ಯ SDA, ಯಮನೂರಪ್ಪ ಬಿಸಿ, ಗದ್ದೆಪ್ಪ DEO, ಬಸವರಾಜ್ BFT, ಮಹಿಳಾ ಮೇಟ್ಸ್ ಗಳು ಹಾಗೂ ಕೂಲಿಕಾರರು ಉಪಸ್ಥಿತರಿದ್ದರು.