ಹುಬ್ಬಳ್ಳಿ: ಜಗತ್ತು ಭಾರತವನ್ನು ಬೆರಗುಗಣ್ಣಿನಿಂದ ನೋಡುತ್ತಿದೆ. ದೇಶವನ್ನು ಮುನ್ನೆಡೆಸುವದು ಯುವಕರ ಕರ್ತವ್ಯವಾಗಿದೆ. ಅಲ್ಲದೆ ಯುವಕರಿಗಾಗಿ ಹೊಸ ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ ಎಂದು ಮೋದಿ ಜಿ ಹೇಳಿದರು.
ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಪ್ರದಾನಿ ಮೋದಿ ಯುವಕರನ್ನು ಕುರಿತು ಮಾತನಾಡಿದರು.
ಮೊದಲಿಗೆ ಕನ್ನಡದಲ್ಲೆ ಭಾಷಣ ಆರಂಭಿಸಿದ ಮೋದಿ ಮೂರು ಸಾವಿರ ಮಠ, ಸಿದ್ದಾರೂಢ ಮಠ, ರಾಣಿ ಚೆನ್ನಮ್ಮ,ಸಂಗೊಳ್ಳಿ ರಾಯಣ್ಣ, ಹಾಗೂ ಅನೇಕ
ಮಠಗಳಿಗೆ ನಮಸ್ಕಾರಗಳನ್ನು ಸಲ್ಲಿಸಿದರು.
ಪ್ರದಾನಿಗಳು ಸ್ವಾಮಿ ವಿವೇಕಾನಂದರ ವಾಣಿಯನ್ನು ಸ್ಮರಿಸಿ, ಶ್ರೀ ಸಿದ್ದೇಶ್ವರ ಸ್ವಾಮೀಜಿಗಳಿಗೆ ಶ್ರದ್ದಾಂಜಲಿ ಸಲ್ಲಿಸಿದರು. ನಂತರ ಕರ್ನಾಟಕದಲ್ಲಿ ಮತ್ತು ಈ ಕ್ಷೇತ್ರದಲ್ಲಿ ಹಲವಾರು ಬಾರಿ ಯಾತ್ರೆ ಮಾಡಿದ್ದೇನೆ. ದೇಶದ ಅಭಿವೃಧ್ಧಿಯಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ. ದೇಶವನ್ನು ಮುನ್ನಡೆಸುವದು ಯುವಕರದ್ದಾಗಿದೆ.
ಕೃಷಿ ಹಾಗೂ ತಂತ್ರಜ್ಞಾನದಲ್ಲಿ ದೇಶ ಮುಂದುವರೆಯುತ್ತಿದೆ. ಕಳೆದ 8 ವರ್ಷಗಳಲ್ಲಿ ಯುವಕರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಯುವಕರಿಗಾಗಿ ಭವ್ಯ ಭವಿಷ್ಯವನ್ನು ರೂಪಿಸಲಾಗಿದೆ. ರನ್ವೇ ರೆಡಿ ಇದೆ ನೀವು ಟೆಕಾಫ್ ಆಗೋದೊಂದೆ ಬಾಕಿ ಇದೆ ಎಂದು ಯುವಕರಿಗೆ ಪ್ರದಾನಿಗಳು ಭರವಸೆ ನೀಡಿದರು.
ಹಲವು ಜಾಗತಿಕ ಕಂಪನಿಗಳು ಭಾರತದತ್ತ ನೋಡುತ್ತಿವೆ. ಎಲ್ಲಾ ಕ್ಷೇತ್ರಗಳಲ್ಲಿ ಭಾರತ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದರು.