ಇಂಡಿ : ಸಂಘಟನೆಗಳು ಶೋಷಿತರ, ಬಡವರ, ಮಹಿಳೆಯರ ದಿನದಲಿತರ ಪರವಾದ ಕಾಳಜಿಗಳನ್ನು ಹೊಂದಿರಬೇಕು ಎಂದು ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ ಹೇಳಿದರು.
ಇಂಡಿ ತಾಲ್ಲೂಕಿನ ಹಂಜಗಿ ಗ್ರಾಮದಲ್ಲಿ ಭೀಮ ಆರ್ಮಿ ಭಾರತ ಎಕತಾ ಮಿಷನ್ ಜಿಲ್ಲಾ ಘಟಕ ಉದ್ಘಾಟಿಸಿ ಮಾತಾನಾಡಿದ ಅವರು, ಬುದ್ದ, ಬಸವಣ್ಣ, ಅಂಬೇಡ್ಕರ್ ರವರ ವಿಚಾರಗಳನ್ನು ಮೈಗೂಡಿಸಿಕೊಂಡು ಸಂಘಟನೆ ಮಾಡಬೇಕು. ಸರ್ವರಿಗೂ ಸಮಪಾಲು, ಸಮಬಾಳು ಎಂಬ ವಿಚಾರವನ್ನು ಜನಮಾನಸದಲ್ಲಿ ಮುಟ್ಟಿಸಲು ಇಂತಹ ಸಂಘಟನೆಗಳು ಅವಶ್ಯಕ ಎಂದು ಹೇಳಿದರು.
ಈ ವೇಳೆ ಬಂದಗಿಸಾಬ ಇನಾಮದಾರ, ಯಾಸಿನ್ ಮುಲ್ಲಾ, ಅಯೂಬ್ ನಾಟೀಕರ, ಮಾಲನಬಿ ಚೌಧರಿ, ಶರಣು ಕೂಟ್ಟಲಗಿ, ತೌಫಿಕ್, ದೀಪು, ಶಿವು ಮುರಗುಂಡಿ, ಮಲಕ್ಕಪ್ಪ ತಡಲಗಿ, ಚನ್ನಪ್ಪ ಬಿರಾದಾರ, ಭೀಮರಾಯ ವಾಡಿ, ಶಬ್ಬು ಟೇನಷನರಿ, ರೇಣುಕಾ ವಾಡಿ ಮುಂತಾದ ನಾಯಕರು ಉಪಸ್ಥಿತರಿದ್ದರು.