ಸಿರವಾರ: ರಾಯಚೂರ ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ಎಡದಂಡೆ ಕಾಲುವೆಯ ಕೊನೆಯ ಭಾಗಕ್ಕೆ ಸಮರ್ಪಕವಾಗಿ ನೀರು ಹರಿಸಬೇಕು ಎಂದು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಮಾನ್ವಿ ಕ್ರಾಸ್ ಬಳಿ ಜಮಾಯಿಸಿದ ನೂರಾರು ರೈತರು ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಮುಖ್ಯರಸ್ತೆ ಸಂಚಾರ ಬಂದ್ ಮಾಡಿದರು. ಮುಖ್ಯಕಾಲುವೆಯಲ್ಲಿ ನೀರಿಲ್ಲದೆ ತೊಂದರೆ ಆಗಿದೆ. ರೈತರಿಗೆ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಸಮರ್ಪಕ ನೀರು ನಿರ್ವಹಣೆ ಮಾಡಬೇಕಾದ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆ. ಕೊನೆ ಭಾಗದವರೆಗೆ ನೀರು ಮುಟ್ಟಿಸುವಲ್ಲಿ ವಿಫಲರಾಗಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ಹಂಪಯ್ಯ ನಾಯಕ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್, ಚುಕ್ಕಿ ಸೂಗಪ್ಪ ಸಾಹುಕಾರ್, ಜೆ.ಶರಣಪ್ಪ ಗೌಡ, ಜೆ. ದೇವರಾಜ್ ಗೌಡ, ಮಲ್ಲಪ್ಪ ಸಾಹುಕಾರ್, ಎನ್. ರೇಣುಕಾ, ಹೆಚ್.ಕೆ. ಅಮರೇಶ್ ಸೇರಿದಂತೆ ರೈತಪರ ಸಂಘಟನೆಗಳ ಮುಖ್ಯಸ್ಥರು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ: ಸುಗೂರೇಶ್ ಹಿರೇಮಠ ವಾಯ್ಸ್ ಆಪ್ ಜನತಾ ಸಿರವಾರ.