ತಾಲ್ಲೂಕಿನ ತಾಂಬಾ ಗ್ರಾಮದಲ್ಲಿ ಚನ್ನಮ್ಮಾಜಿ ವೃತ್ತದಲ್ಲಿ ೨೪೪ ನೇ ಜಯಂತಿತ್ಸೊವದಲ್ಲಿ ಜಿಲ್ಲಾ ಪಂಚಮಸಾಲಿ ಯುವ ಘಟಕ ಕಾರ್ಯದರ್ಶಿ ಹಾಗೂ ಗ್ರಾಮ ಘಟಕದ ಕರವೇ ಅಧ್ಯಕ್ಷ ಶಿವರಾಜ ಕೆಂಗನಾಳ ಮಾತಾನಾಡಿದರು.
ಕನ್ನಡನಾಡಿನ ವೀರಮಹಿಳೆಯರಲ್ಲಿ ಅಗ್ರ ಪಂಕ್ತಿಗೆ ಸೇರಿದವರು, ಸ್ವಾತಂತ್ರ್ಯ ಸ್ವಾಭಿಮಾನಗಳ ಸಾಕಾರಮೂರ್ತಿ ಕಿತ್ತೂರಿನ ರಾಣಿ. ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಕಿರಿಯ ಹೆಂಡತಿ. ತನ್ನ ಪುಟ್ಟ ರಾಜ್ಯದ ಸ್ವಾತಂತ್ರ ರಕ್ಷಣೆಗಾಗಿ ಬ್ರಿಟಿಷರ ದೊಡ್ಡ ಸೈನ್ಯದ ವಿರುದ್ಧ ಸಿಡಿದೆದ್ದು ಹೋರಾಟ ಮಾಡಿದ್ದಾರೆ, ಅಲ್ಲಿ ತೋರಿಸಿದ ಧೈರ್ಯ, ಸಾಹಸ, ಕೆಚ್ಚದೆಯ ಚೆನ್ನಮ್ಮರನ್ನು ಅಜರಾಮರವಾದ ಕೀರ್ತಿ ಶಿಖರಕ್ಕೇರಿಸಿವೆ. ಚೆನ್ನಮ್ಮರಿಂದ ಕಿತ್ತೂರು ಪ್ರಸಿದ್ಧವಾಗಿದೆ. ಇನ್ನೂ ತಾಲ್ಲೂಕು ಗ್ರಾಮ ಮಟ್ಟದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಸುವ ಜೊತೆಗೆ ಸ್ವತಂತ್ರ ಹೋರಾಟಗಾರರ ಕುರಿತು ವಿಭಿನ್ನ ಕಾರ್ಯಕ್ರಮ ನಡೆಯಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ರಾಜಶೇಖರ್ ಗಂಗನಳ್ಳಿ, ಸದಸ್ಯ ರಾಮಚಂದ್ರ ದೊಡ್ಮನಿ, ಗುರಪ್ಪ ಜಂಬಗಿ, ಬಸವರಾಜ ಸರಸಂಬಿ, ಮಾಶಿಮ್ ವಾಲಿಕಾರ, ಅಲ್ಲಾಭಕ್ಷ ದಡೆದ, ಪರಶು ಬಿಸನಾಳ, ಹಿರಿಯ ಮುಖಂಡ ದುಂಡಪ್ಪ ರೋಟ್ಟಿ, ಶಿಕ್ಷಕ ಮಹಾದೇವ ಭೈರಾಮಡಗಿ, ಅಪ್ಪಸಾಹೇಬ ಅವಟಿ, ಗೋಪಾಲ ಅವರಾದಿ, ಕಲ್ಯಾಣಿ ಕೆಮಶೆಟ್ಟಿ, ಅಮರ ವಸ್ತ್ರದ, ಇನ್ನೂ ಅನೇಕ ಮುಖಂಡರು ಭಾಗವಹಿಸಿದ್ದರು.