ಲಿಂಗಸೂಗೂರು: ಭಾರತ ಕಂಡ ಅಪ್ರತಿಮ ಹೋರಾಟಗಾರ, ಭಾರತಾಂಬೆಯ ಚರಣಗಳಲ್ಲಿ ಪ್ರಾಣಾರ್ಪಣೆಗೈದ ಕ್ರಾಂತಿಕಾರಿ ಭಗತ್ ಸಿಂಗ್ ರವರ 115 ನೇ ಜಯಂತಿಯನ್ನು ತಾಲೂಕಿನ ನಾಗರಹಾಳ ಗ್ರಾಮದಲ್ಲಿ ಭಗತ್ ಸಿಂಗ್ ಅಭಿಮಾನಿ ಬಳಗದಿಂದ ಭಗತ್ ಸಿಂಗ್ ರವರ ಭಾವಚಿತ್ರಕ್ಕೆ ಹೂ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು.
ಈ ವೇಳೆ ಬಿಜೆಪಿ ತಾಲೂಕಾ ಯುವ ಮೋರ್ಚಾ ಉಪಾಧ್ಯಕ್ಷ ಅಮರೇಶ ಕಡಿ ಮಾತನಾಡಿ ಭಗತ್ ಸಿಂಗ್ ಸ್ವಾತಂತ್ರ್ಯ ಹೋರಾಟಕ್ಕಾಗಿ ತಮ್ಮ ಪ್ರಾಣವನ್ನೆ ಮುಡಿಪಾಗಿಟ್ಟು ದೇಶದ ಸ್ವಾತಂತ್ರ್ಯ ಕಹಳೆಯನ್ನು ಭಾರತದ ಯುವಕರಲ್ಲಿ ಮೂಡಿಸಿ ಗುಲಾಮತನದಿಂದ ಮುಕ್ತರಾಗಬೇಕೆಂದು ಕರೆ ಕೊಟ್ಟ ಕ್ರಾಂತಿಕಾರಿ. ಇವರ ತತ್ವ ಆದರ್ಶಗಳನ್ನು ಇಂದಿನ ಪೀಳಿಗೆ ಅನುಸರಿಸಿಕೊಂಡು ಭಾರತ ಮಾತೆಯ ರಕ್ಷಣೆಗೆ ಮುಂದಾಗಬೇಕಿದೆ. ಅಲ್ಲದೆ “ಮನುಷ್ಯನಿಂದ ಮನುಷ್ಯನ ಶೋಷಣೆಯನ್ನು ಕೊನೆಗಾಣಿಸುವದೇ ಅಂತಿಮ ಧ್ಯೇಯ” ಎನ್ನುವ ಅವರ ಮಾತುಗಳನ್ನು ಎಲ್ಲರು ಪಾಲಿಸಬೇಕು ಎಂದರು.
ಈ ಸಂಧರ್ಭದಲ್ಲಿ ನಾಗರಾಜ ಭೋವಿ, ಯಮನೂರ ಕನಕೇರಿ, ಮಲ್ಲು ಬಡಿಗೇರ, ಅಭಿಷೇಕ್, ಸೈಯದ್ ಪೀರಾ, ಸಂಗಯ್ಯ ಮಠಪತಿ, ಬಸವರಾಜ್, ಮಂಜು ಪಾಟೀಲ್, ಅಮರೇಶ ಕುಂಬಾರ, ಈರಣ್ಣ ಬಡಿಗೇರಿ ಉಪಸ್ಥಿತರಿದ್ದರು.