ರಾಯಚೂರು. ನಗರದ ಸಾಂಸ್ಕೃತಿಕ, ಸಾಹಿತಿಕ ಸಂಘಟನೆಯಾದ ಶೃತಿ ಸಾಹಿತ್ಯ ಮೇಳದಿಂದ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶೃತಿ ಸಾಹಿತ್ಯ ಮೇಳದ ಗೌರವಾಧ್ಯಕ್ಷರು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾಕ್ಟರ್ ಜಯಲಕ್ಷ್ಮಿ ಮಂಗಳಮೂರ್ತಿ ಅವರು ಮಾತನಾಡಿ ಕುವೆಂಪು ಅವರು ಸಾಮಾಜಿಕ ನ್ಯಾಯವನ್ನು ಸಾರಿದ ಮಹಾಮಾನವತಾವಾದಿ, ಭಾವನ ಜೀವಿ. ರಸಋಷಿ, ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಅವರು ಕನ್ನಡ ಸಾಹಿತ್ಯವನ್ನು ಪ್ರೀತಿಸಿ ಶ್ರೀಮಂತಗೊಳಿಸಿ ಕನ್ನಡಕ್ಕೆ ಪ್ರಥಮ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಮಹಾಚೇತನ. ಎಂದು ಹೇಳಿದರು.ಈ
ಸಂದರ್ಭದಲ್ಲಿ ಶೃತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಮಾತನಾಡಿ ಕುವೆಂಪು ಅವರು ಯುಗದ ಕವಿ, ಜಗದ ಕವಿ, ರಸಋಷಿ, ಕನ್ನಡನಾಡಿನ ಎರಡನೆಯ ರಾಷ್ಟ್ರಕವಿ. ಕನ್ನಡದ ಅಸ್ಮಿತೆಗೆ ಹೋರಾಡಿದ ಮಹಾಚೇತನ. ‘ಎಲ್ಲಾದರೂ ಇರು, ಎಂತಾದರು ಇರು, ನೀ ಕನ್ನಡವಾಗಿರು, ಬಾರಿಸು ಕನ್ನಡ ಡಿಂಡಿಮವ, ಎಂದು ಕನ್ನಡ ಅಭಿಮಾನವನ್ನು ಸಾರಿದ ಉತ್ಕೃಷ್ಟ ಕವಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರಮೇಶ್ ಕುಲ್ಕರ್ಣಿ, ಜೆ. ವೀರೇಶ್, ಖಜಾಂಚಿ ವಿಜಯಲಕ್ಷ್ಮಿ ಸೇಡಂಕರ, ವಸುದೇಂದ್ರ ಸಿರವಾರ, ಪ್ರಾಣೇಶ್, ವೈ.ಕೆ. ಯಶೋಧ ರವೀಂದ್ರ ಕುಲಕರ್ಣಿ ಮುಂತಾದವರು ಇದ್ದರು.