ಇಂಡಿ : ವೀರ ಸಾವರ್ಕರ್ ಮತ್ತು ಅವರ ಕುಟುಂಬ ದೇಶಕ್ಕೆ ನೀಡಿದ ಕೋಡುಗೆ ಅನನ್ಯ ಆದರೆ ವೀರ ಸಾವರ್ಕರ್ ಭಾವಚಿತ್ರ ಮುಸ್ಲಿಂ ಪ್ರದೇಶದಲ್ಲಿ ಏಕೆ ಹಚ್ಚಬೇಕು ? ಎಂದು ಸಮರ್ಥಿಸಿಕೊಂಡ ಸಿದ್ದರಾಮಯ್ಯನವರ ನೀತಿ ಖಂಡಿನೀಯ ಎಂದು ಜಿಲ್ಲಾ ಬಿಜಿಪಿ ಉಪಾಧ್ಯಕ್ಷ ದಯಾಸಾಗರ ಪಾಟೀಲ್ ಕಿಡಿಕಾರಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು, ದೇಶದ ಸ್ವಾತಂತ್ರಕ್ಕಾಗಿ ಪರಕೀಯರಿಂದ ಕ್ರೂರ ಶಿಕ್ಷೆ ಅನುಭವಿಸಿದ ಹೋರಾಟಗಾರರಲ್ಲಿ ವೀರ ಸಾವರ್ಕರ್ ಒಬ್ಬರು. ಹೀಗಾಗಿ ಗಣೇಶ ಉತ್ಸವದ ಸಂದರ್ಭದಲ್ಲಿ ಪ್ರತಿಯೊಬ್ಬರೂ ವೀರ ಸಾವರ್ಕರ್ ಭಾವಚಿತ್ರ ಇಟ್ಟು ಗೌರವ ಸಲ್ಲಿಸಬೇಕು ಎಂದು ಹೇಳಿದರು.
ಆದರೆ ಕಾಂಗ್ರೆಸ್ ಪಕ್ಷವು ಧರ್ಮದ ಮಧ್ಯ ವಿಷ ಬಿತ್ತಿ ಜಗಳ ಹಚ್ಚುವ ಕೆಲಸ ಮಾಡುತ್ತಿದೆ. ಜೊತೆಗೆ ವೀರ ಸಾವರ್ಕರ್ ಭಾವಚಿತ್ರ ಮುಸ್ಲಿಂ ಪ್ರದೇಶದಲ್ಲಿ ಏಕೆ ಹಚ್ಚಬೇಕು ? ಎಂದು ಸಮರ್ಥಿಸಿಕೊಂಡ ಸಿದ್ದರಾಮಯ್ಯನವರ ನೀತಿ ಖಂಡನೀಯ. ಸ್ವತಂತ್ರ ಸೇನಾನಿ ವೀರ ಸಾವರ್ಕರ್ ಅವರಿಗೆ ಕಾಂಗ್ರೆಸ್ ಪಕ್ಷವು ಅವಮಾನಿಸುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸಿನವರು ಸ್ವಾರ್ಥಕ್ಕಾಗಿ ದೇಶ, ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಈ ಹಿಂದಿನ ಚುನಾವಣೆ ಪೂರ್ವದಲ್ಲಿ ಹಿಂದೂ ಧರ್ಮವನ್ನು ಒಡೆದು ಲಿಂಗಾಯತ ಧರ್ಮ ಮಾಡಲು ಹೋಗಿ ಜನರಿಂದ ತಕ್ಕ ಪಾಠ ಕಲಿತ್ತಿದ್ದಾರೆ . ಅದನ್ನು ಇನ್ನೊಮ್ಮೆ ನೆನಪಿಸಿಕೊಳ್ಳುಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸೋಮಶೇಖರ್ ದೇವರ, ವಿಜು ಮೂರಮನ, ಶ್ರೀಶೈಲಗೌಡ ಬಿರಾದಾರ, ಭೀಮಸಿಂಗ ರಾಠೋಡ, ಜಟ್ಟು ಮರಡಿ, ಸಾಹೇಬಗೌಡ ಇಂಡಿ, ಮಲ್ಲನಗೌಡ ಬಿರಾದಾರ, ಮಲ್ಲು ಚಾಕುಂಡಿ, ನಾಗೇಶ ಶಿಂಧೆ ಉಪಸ್ಥಿತಿರು.