ಅಫಜಲಪುರ : ಅಂಗವಿಕಲರು ಕೂಡ ತಮ್ಮ ಸ್ವಂತ ದುಡಿಮೆಯಲ್ಲಿ ದುಡಿದು ಸಮಾಜದಲ್ಲಿ ಎಲ್ಲರಂತೆ ಬಾಳುವಂತಾಗಲಿ ಎಂಬ ಉದ್ದೇಶದಿಂದ ಗ್ರಾಮ ಪಂಚಾಯತ 15 ನೇ ಹಣಕಾಸು ಯೋಜನೆಯಡಿಯಲ್ಲಿ ಅಂಗವಿಕಲರ ಕ್ಷೇಮಾಭಿವೃದ್ಧಿ ಶೇ5ರ ಯೋಜನೆಯಲ್ಲಿ ಸುಮಾರು 40 ವಿಶೇಷಚೇತರಿಗೆ ಹೊಲಿಗೆ ಯಂತ್ರ ನೀಡಲಾಗಿದೆ.ಸ್ವಯಂ ಉದ್ಯೋಗ ಕೈಗೊಳ್ಳುವ ಮೂಲಕ ಅಂಗವಿಕಲರು ಸ್ವಾವಲಂಬಿ ಜೀವನ ನಡೆಸಬೇಕು’ ಎಂದು ಮಣ್ಣೂರ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ಬೋರಮ್ಮ ಕುಂಬಾರ ಹೇಳಿದರು.
ಅವರು ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ನಡೆದ ಅಂಗವಿಕಲರಿಗೆ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಆರತಿ ಬಸವರಾಜ ಜನ್ನಾ ಉಪಾಧ್ಯಕ್ಷ ಬಿ ರಾಜು ಬೆನಕನಹಳ್ಳಿ,ಗ್ರಾ,ಪಂ ಮಾಜಿ ಅಧ್ಯಕ್ಷ ರಮೇಶ ಬಾಕೆ ಕಾರ್ಯದರ್ಶಿ ನಾರಾಯಣ ಚವ್ಹಾಣ, ಸದಸ್ಯ ಬಸವರಾಜ ವಾಯಿ ಗುರಪ್ಪ ಬಿಜಾಪುರ ಸಾವಿತ್ರಿ ಹೊಸೂರಕರ, ಶಿವಪ್ಪ ಕರೂಟಿ ಮೀನಾಕ್ಷಿ ಸುತಾರ, ಹಣಮಂತ ನಾವಾಡಿ ಆರತಿ ಹೊಸೂರಕರ ದೇವಪ್ಪ ಲಾಳಸಂಗಿ ಅನಿತಾ ಜಾನಕಿ, ರಿಯಾಜ ಲಾಳಸಂಗಿ, ರೇಖಾ ನಾವದಗಿ, ಲಾಡ್ಲೇಮಶಾಕ ಗೌರ, ರೇಣುಕಾ ದೈತನ, ದುಂಡಪ್ಪ ಅಲ್ಲಾಪೂರ, ರಮೀಜಾ ಬಡೆಘರ, ಅಂಜನಾ ಚಿಕ್ಕಮಣೂರ, ಸುಜಾತಾ ಪ್ಯಾಟಿ, ಹಾಜಿಮಲಂಗ ಕರವಲ ಗಡ್ಡೆಪ್ಪ ಬಸ್ಸಿನಕರ ಶೇಖಹುಸೇನಿ ಕೊರಬು ಸೇರಿದಂತೆ ಅಂಗವಿಕಲ ಫಲಾನುಭವಿಗಳು ಗ್ರಾಮಸ್ಥರು ಇದ್ದರು
ವರದಿ: ಉಮೇಶ್ ಅಚಲೇರಿ ಅಫಜಲಪುರ/ಕಲ್ಬುರ್ಗಿ