ಲಿಂಗಸೂಗೂರು: ತಾಲೂಕಿನ ತೊಂಡಿಹಾಳ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ನಡೆಯಿತು. ಈ ವೇಳೆ ಹಲಕಾವಟಿಯ ಗ್ರಾ. ಪಂ. ವ್ಯಾಪ್ತಿಗೆ ಬರುವ ಹಲಕಾವಟಗಿ, ತೊಂಡಿಹಾಳ, ಪಲಗಲದಿನ್ನಿ, ಅಂಕನಾಳ ಹಾಗೂ ಉಪನಾಳ ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸದಸ್ಯರು ತಹಶೀಲ್ದಾರ್ ಬಲರಾಮ ಕಟ್ಟಿಮನಿ ಅವರಿಗೆ ಮನವಿ ಮಾಡಿಕೊಂಡರು.