ಬಾಗಲಕೋಟೆ: ಕೆರೂರ ಘರ್ಷಣೆ ಪ್ರಕರಣದಲ್ಲಿ ಗಾಯಗೊಂಡ ಗಾಯಾಳುಗಳ ಮನೆಗೆ ಸಚಿವ ಮುರುಗೇಶ್ ನಿರಾಣಿ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು.
ಬಾಗಲಕೋಟೆ ಜಿಲ್ಲೆಯ ಇನಾಂ ಹುಲ್ಲಿಕೇರಿ ಗ್ರಾಮಕ್ಕೆ ಭೇಟಿ ನೀಡಿದ ಅವರು ಗಾಯಗೊಂಡ ಯಮನೂರ ಚುಂಗಿನ ಕುಟುಂಬದ ಸದಸ್ಯರಿಂದ ಘಟನೆ ಬಗ್ಗೆ ಮಾಹಿತಿ ಪಡೆದರು.
ಚಿಕಿತ್ಸೆಗಾಗಿ ಕುಟುಂಬಕ್ಕೆ ಹಣಕಾಸಿನ ನೆರವು ನೀಡಿದ ನಿರಾಣಿ ಇನಾಂ ಹುಲ್ಲಿಕೇರಿ ಗ್ರಾಮದಿಂದ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಗಾಯಾಳುಗಳ ಭೇಟಿಗೆ ತೆರಳಿದರು.