ಸಿರವಾರ: ತೀವ್ರ ಕುತೂಹಲ ಕೆರಳಿಸಿದ್ದ ಸಿರವಾರ ಪಟ್ಟಣ ಪಂಚಾಯತ್ ಚುನಾವಣೆ ಫಲಿತಾಂಶ ಘೋಷಣೆಯಾಗಿದ್ದು ಅತಂತ್ರ ಫಲಿತಾಂಶ ಬಂದಿದೆ.20 ಸದಸ್ಯ ಬಲ ಹೊಂದಿದ ಪಂಚಾಯಿತಿಗೆ 27 ರಂದು ಮತದಾನ ನಡೆದಿತ್ತು.
ಕಾಂಗ್ರೇಸ್ 20 ವಾರ್ಡು, ಜೆಡಿಎಸ್ 20 ವಾರ್ಡುಗಳಲ್ಲಿ ಸ್ಪರ್ದಿಸಿದ್ದರೆ, ಬಿಜೆಪಿ 15 ವಾರ್ಡುಗಳಲ್ಲಿ ಸ್ಪರ್ಧೆ ಮಾಡಿತ್ತು. ಇದೀಗ ಫಲಿತಾಂಶ ಪ್ರಕಟಗೊಂಡಿದ್ದು ಕಾಂಗ್ರೇಸ್ 9, ಬಿಜೆಪಿ 6, ಜೆಡಿಎಸ್ 3, ಪಕ್ಷೇತರರು 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.