ಅಫಜಲಪುರ: ಪಟ್ಟಣದ ಶ್ರೀ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಬರುವ ಶ್ರೀ ಬಸವರಾಜ ಪಾಟೀಲ್ ಸೇಡಂ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ 2021-22 ನೇ ಸಾಲಿನ ಫಲಿತಾಂಶದಲ್ಲಿ ಲಕ್ಷ್ಮೀ ಗಡಗಿ ಎಂಬ ವಿದ್ಯಾರ್ಥಿನಿ ಕಲಾ ವಿಭಾಗದಲ್ಲಿ ಪ್ರತಿಶತ 586(97.66%) ಅಂಕಗಳನ್ನು ಪಡೆಯುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ ಬಂದಿದ್ದಾಳೆ.
ಅಲ್ಲದೆ ದ್ವೀತಿಯ ಸ್ಥಾನವನ್ನು ವಿದ್ಯಾರ್ಥಿಯಾದ ಅಬ್ದುಲ್ ಮಾಜಿದ್ ಹವಾರೆ 574.(95.66%.) ಅಂಕಗಳನ್ನು ಪಡೆದಿದ್ದಾನೆ. ಹಾಗೂ ತೃತೀಯ ಸ್ಥಾನವನ್ನು ಜಗದೀಶ್ ಹೂವಿನಹಳ್ಳಿ 563. (93.83%) ಅಂಕಗಳನ್ನು ಪಡೆದಿದ್ದಾನೆ.
ವಾಣಿಜ್ಯ ವಿಭಾಗದಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ವನ್ನು ಅಭಿಲಾಶ್ ಜಾಮಗೊಂಡ 554(92.30%) ಅಂಕಗಳನ್ನು ಪಡೆದಿದ್ದಾನೆ. ದ್ವೀತಿಯ ಸ್ಥಾನ ವನ್ನು ವಿದ್ಯಾರ್ಥಿನಿಯಾದ ಅರ್ಪಿತ ಕುಂಬಾರ್ 550.(91.66%) ಅಂಕಗಳನ್ನು ಪಡೆದಿದ್ದಾಳೆ. ಈ ಸ್ಥಾನವನ್ನು ವಿದ್ಯಾರ್ಥಿನಿಯಾದ ಐಶ್ವರ್ಯ ಪಾಣಿಲೆ 535.(89.16%) ಅಂಕಗಳನ್ನು ಪಡೆದಿದ್ದಾಳೆ.
ಕಾಲೇಜಿಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಚಂದ್ರಶೇಖರ್ ನಿಂಬಾಳ, ಹಾಗೂ ಕಾರ್ಯದರ್ಶಿಗಳಾದ ಮಳೆಪ್ಪ ಡಾಂಗೆ ಮತ್ತು ಕಾಲೇಜಿನ ಪ್ರಾಚಾರ್ಯರಾದ ಜಾಫರ್ ಸಾಬ್ ದೇವರಮನಿ ಯವರು ಕಾಲೇಜಿನ ಉಪನ್ಯಾಸಕರಿಗೂ ಹಾಗೂ ವಿದ್ಯಾರ್ಥಿಗಳಿಗು ಅಭಿನಂದನೆಗಳನ್ನು ಸಲ್ಲಿಸಿದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ: