ವಿಜಯಪುರ: ಮಹಿಳೆಯ ಕೊರಳಿನಲ್ಲಿದ್ದ ಚಿನ್ನದ ಮಾಂಗಲ್ಯ ಕಿತ್ತುಕೊಂಡು ಹೋಗುತ್ತಿದ್ದ ಕಳ್ಳನ್ನು ಹಿಡಿದುಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಭೀಮಾಬಾಯಿ ಈರಪ್ಪ ಧಿವಂತಗಿ ಮಹಿಳೆಯ ಚಿನ್ನದ ಮಾಂಗಲ್ಯ ಕಿತ್ತುಕೊಂಡು ಮೂವರು ಕಳ್ಳರು ಓಡಿ ಹೋಗುವ ವೇಳೆಯಲ್ಲಿ ರೈಲ್ವೆ ಪೊಲೀಸರು ಹಾಗೂ ಸ್ಥಳೀಯರು ಬೆನ್ನಟ್ಟಿ ಮೂವರು ಆರೋಪಿಯಲ್ಲಿ ಸುದೀಪ್ ಸಿದ್ದಪ್ಪ ಕಾಂಬ್ಳೆ ಹಿಡಿದುಕೊಂಡಿದ್ದಾರೆ. ಇನ್ನಿಬ್ಬರ ಪರಾರಿಯಾಗಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ವಿಜಯಪುರ ರೈಲ್ವೆ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.