ಇಂಡಿ : ಉಪಹಾರ ಸೇವಿಸಿದ ಮಕ್ಕಳು ವಾಂತಿ ಬೇಧಿಯಿಂದ ಬಳಲಿದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಡವಲಗಾ ಗ್ರಾಮದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಯಲ್ಲಿ ನಡೆದಿದೆ.
ಉಪಹಾರದಲ್ಲಿ ಅವಲಕ್ಕಿ ಸೇವಿಸಿದ ಬಳಿಕ ಅಸ್ವಸ್ಥರಾಗಿದ್ದರು. ವಿಷಾಹಾರದಿಂದ ಸಮಸ್ಯೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಸ್ವಸ್ಥಗೊಂಡಿದ್ದ ವಸತಿ ಶಾಲೆಯ 25 ವಿದ್ಯಾರ್ಥಿನಿಯರನ್ನು ತಡವಲಗಾ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ವಿದ್ಯಾರ್ಥಿನಿಯರು ಈಗ ಚೇತರಿಸಿಕೊಂಡಿದ್ದಾರೆ ಎಂದು
ಆಸ್ಪತ್ರೆಗೆ ಭೇಟಿ ನೀಡಿದ ತಾಲ್ಲೂಕು ವೈಧ್ಯಧಿಕಾರಿ ಅರ್ಚನಾ ಕುಲಕರ್ಣಿ ಮತ್ತು ಕ್ಷೇತ್ರ ಶಿಕ್ಷಣಧಿಕಾರಿ ವಸಂತ ರಾಠೋಡ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಬೇಟಿ ನೀಡಿ ಮಕ್ಕಳ ಯೋಗ ಕ್ಷೇಮದ ಬಗ್ಗೆ ಆಲಿಸಿದರು.