ಲಿಂಗಸುಗೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ) ಬೆಂಗಳೂರು ವತಿಯಿಂದ 2019 ನೇ ಸಾಲಿನ ರಾಜ್ಯ ಪ್ರಶಸ್ತಿಗೆ ರಾಯಚೂರ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣದ ವಿಜಯವಾಣಿ ವರದಿಗಾರ ಡಾ॥ ಶರಣಯ್ಯ ಬಿ.ಒಡೆಯರ್ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ತಮಿಳುನಾಡಿನ ಇನ್ವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪಡೆದುಕೊಂಡಿದ್ದ ಶರಣಯ್ಯ ಬಿ.ಒಡೆಯರ್ ರವರಿಗೆ ಮತ್ತೊಂದು ಕಿರೀಟ ಮುಡಿಗೇರಿದೆ.ಮಾಧ್ಯಮ ಕ್ಷೇತ್ರದ ಸಾಧನೆಗೆ ಅತ್ಯಂತ ಗೌರವಿತವಾದ ಮಂಡಿಬೆಲೆ ಶಾಮಣ್ಣ ಸ್ಮಾರಕ ರಾಜ್ಯ ಪ್ರಶಸ್ತಿ ಲಭಿಸಿರುವುದು ವಿಶೇಷವಾಗಿದೆ.
ಸದಾ ಕ್ರಿಯಾಶೀಲ ಮತ್ತು ಸೃಜನಶೀಲ ಬರವಣಿಗೆಯ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಪತ್ರಕರ್ತ ಡಾ॥ಶರಣಯ್ಯ ಬಿ.ಒಡೆಯರ್ ರವರಿಗೆ ಜನವರಿ 3 ಮತ್ತು 4 ನೇ ತಾರೀಖಿನಂದು ಜರುಗುವ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲುಜೆ) ಕಲಬುರಗಿ ರಾಜ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವದು.