ಲಿಂಗಸೂಗೂರು:ರಾಯಚೂರ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಐತಿಹಾಸಿಕ ಮುದಗಲ್ ಪಟ್ಟಣದ ಚರ್ಚನಲ್ಲಿ ಏಸುಕ್ರಿಸ್ತನ ಜನ್ಮದಿನವಾದ ಇಂದು ಕ್ರಿಶ್ಚಿಯನ್ ಸಮುದಾಯದವರು ಸಂಭ್ರಮದಿಂದ ಕ್ರಿಸ್‌ಮಸ್ ಆಚರಿಸಿದರು.
ಬೆಳಿಗ್ಗೆ ಫಾದರ್‌ಗಳಾದ ಮ್ಯಾಕ್ಸಿನ್ ಡಿಸೋಜ್ ಮತ್ತು ಸುನೀಲ್ ರವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಏಸುಕ್ರಿಸ್ತನ ಉಪದೇಶವನ್ನು ಸಾರಲಾಯಿತು. ಇದೆ ವೇಳೆ ನೂತನವಾಗಿ ಆಯ್ಕೆಯಾಗಿರುವ ಎಂಎಲ್ಸಿ.ಶರಣಗೌಡ ಪಾಟೀಲ್ ಬಯ್ಯಾಪುರ ರವರು ಚರ್ಚ್ಗೆ ಬೇಟಿ ನೀಡಿ ಫಾದರ್ ಮತ್ತು ಕ್ರಿಶ್ಚಿಯನ್ ಸಮುದಾಯದವರಿಗೆ ಕೇಕ್ ತಿನ್ನಿಸಿ ಶುಭ ಕೋರಿದರು.
ಈ ಸಂದರ್ಭ ಸಿಸ್ಟರ್ ಕ್ರೀಷಿನ್, ಮುಖಂಡರಾದ ಜೋಸೆಫ್ ಈರ್ಲಾ, ಡೆವಿಡ್ ಕಟ್ಟಿಮನಿ, ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ಆರೋಗ್ಯಪ್ಪ ಕುರಿ, ಪೋಲರಾಜ ಎಮ್ಮಿ, ಅನೀಲ್,ವೀರೇಶ ವಡ್ಡರ್, ರಾಘವೇಂದ್ರ ದೇಶಪಾಂಡೆ, ಅನೀಲ್ ಕುಮಾರ,ಡಾ.ಅಯ್ಯಪ್ಪ ಬನ್ನಿಗೋಳ,ಅಶೋಕ ಗೌಡ ಪಾಟೀಲ್,ಸತೀಶ್ ಬೋವಿ,ರಾಜು ಮಾಲಿ ಪಾಟೀಲ್,ಎಲ್.ಟಿ.ನಾಯ್ಕ ಮೈಬೂಬು ಬಾರಿಗಿಡ ಸೇರಿದಂತೆ ಅನೇಕರು ಇದ್ದರು.