ಸಿಂಧನೂರು: ರಾಯಚೂರ ಜಿಲ್ಲೆಯ ಸಿಂಧನೂರು ನಗರದ ಆರ್ ಜಿ ಎಂ ಕಾಲೇಜು ಮೈದಾನದಲ್ಲಿ ಸಿಂಧನೂರು ಪೊಲೀಸ್ ಉಪ ವಿಭಾಗದ ವತಿಯಿಂದ ಎಲ್ಲಾ ಪೊಲೀಸ್ ಸಿಬ್ಬಂದಿ ಮಕ್ಕಳಿಗೆ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.ಸಿಂಧನೂರು ನಗರದ ಡಿವೈಎಸ್ಪಿ ಹಾಗೂ ಸಿಪಿಐ ನೇತೃತ್ವದಲ್ಲಿ ಈ ಕ್ರೀಡಾಕೂಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕ್ರೀಡಾಕೂಟದಲ್ಲಿ ಮ್ಯಾಜಿಕ್ ಚೇರ್,ಕಬಡ್ಡಿ,ಖೋ ಖೋ,ಶಟಲ್ ಕಾಕ್,ವಾಲಿಬಾಲ್ ಸೇರಿದಂತೆ ಇನ್ನೀತರ ಆಟಗಳು ಆಡಿಸಿದರು.ಈ ವೇಳೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.