ವಿಜಯಪುರ : ಜಿಲ್ಲಾಸ್ಪತ್ರೆಯ ಬಾಣಂತಿಯರ ನರಳಾಟ ಪ್ರಕರಣದ ವರದಿ ಇಂದು ಬರುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಮಾಹಿತಿ ನೀಡಿದರು. ನಗರದಲ್ಲಿ ಮಾತನಾಡಿದ ಅವರು, ಎಸಿ ಬಲರಾಮ ಲಮಾಣಿ ನೇತೃತ್ವದ ತಂಡ ಬಾಣಂತಿಯರ ನರಳಾಟದ ತನಿಖೆ ಮಾಡುತ್ತಿದ್ದು, ವರದಿ ನೀಡಲು ಕಾಲಾವಕಾಶ ಕೇಳಿದ್ದಾರೆ ಎಂದರು. ಅದಕ್ಕಾಗಿ ಬಾಣಂತಿಯರ ನರಳಾಟ ವರದಿ ಇಂದು ಬರುವ ಸಾಧ್ಯತೆ ಇದೆ ಎಂದರು.
ಅಲ್ಲದೇ, 21 ಬಾಣಂತಿಯರಲ್ಲಿ ಓರ್ವ ರೋಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದಂತೆ ಜಿಲ್ಲಾಸ್ಪತ್ರೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 100 ಬೆಡ್ ಇರುವ ಆಸ್ಪತ್ರೆ ಆಗಿದೆ. ಜಿಲ್ಲೆ ಸೇರಿದಂತೆ ಪಕ್ಕದ ರಾಜ್ಯದಿಂದಲ್ಲೂ ರೋಗಿಗಳು ಆಗಮಿಸುತ್ತಾರೆ. ಅದಕ್ಕಾಗಿ ಕೆಲಸದ ಒತ್ತಡದಿಂದ ಈ ಘಟನೆ ಆಗಿದೆ ಎಂದರು. ದಿನಂಪ್ರತಿ 10 ರಿಂದ 15 ಸಿಜೇರಿಯನ್ ಆಗುತ್ತಿವೆ. ಈ ವೇಳೆಯಲ್ಲಿ ವರ್ಕ್ ಲೋಡ್ ಜಾಸ್ತಿ ಆಗಿದೆ. ಅದಕ್ಕಾಗಿ ಮುಂದಿನ ದಿನಗಳಲ್ಲಿ ಈ ತರಹ ಆಗದಂತೆ ವೈದ್ಯರಿಗೆ ಖಡಕ್ ಸೂಚನೆ ನೀಡಿದ್ದೇನೆ ಎಂದರು.