ಅಫಜಲಪುರ : ಅಂಗನವಾಡಿ ಕೇಂದ್ರಗಳ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆಗೊಳಿಸಲು ಅಂಗನವಾಡಿ ಕಾರ್ಯಕರ್ತೆಯರ ಶ್ರಮ ಮುಖ್ಯವಾಗಿದೆ ಎಂದು ಜಿಲ್ಲಾ ಸಂಯೋಜಕ ಗುರು ಜಮಲಪುರ ಹೇಳಿದರು.
ಅವರು ತಾಲೂಕಿನ ರಾಮನಗರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಅಫಜಲಪುರ ಇವರ ಸಂಯುಕ್ತ ಆಶ್ರಯದಲ್ಲಿ ಕೆ.ಕೆ.ಆರ್ .ಡಿ.ಬಿ, ಮೈಕ್ರೋ ಯೋಜನೆ ಅಡಿಯಲ್ಲಿ, ಹಮ್ಮಿಕೊಂಡ ಅಂಗನವಾಡಿ ಕಾರ್ಯಕರ್ತೆ – ಯರಿಗೆ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರುು.
ಅಂಗನವಾಡಿ ಕೇಂದ್ರಗಳು ಮೂರು ವರ್ಷದ ಮಗುವಿನಿಂದ ಆರು ವರ್ಷಗಳವರೆಗೆ ಶಾಲಾ ಪೂರ್ವ ಶಿಕ್ಷಣ ಪಡೆಯಲು ಅರ್ಹವಾಗಿರುವ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಆ ಮಗುವಿಗೆ ಶಿಕ್ಷಣ ನೀಡುವ ಮೂಲಕ ಮಾನಸಿಕ, ದೈಹಿಕ, ಸಾಮಾಜಿಕ ಬೆಳವಣಿಗೆ ಶ್ರಮಿಸಬೇಕು ಎಂದು ಹೇಳಿದರು
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿ ಗುರುಬಾಯಿ ಸಣದಾನಿ, ವಲಯ ಮೇಲ್ವಿಚಾರಕಿ ಮಲಕಮ್ಮ ನಿಂಬಾಳ, ಅಂಗನವಾಡಿ ಕಾರ್ಯಕರ್ತೆ ವನಮಲಾ, ಯಡಸೆ, ಆಶಾಬಿ, ಮೇಸ್ತ್ರಿ, ಜಗದೇವಿ ಹುಂಡೇಕಾರ, ಗೌರಾಬಾಯಿ ಡೊಂಬರ, ಶಾಕೇರಾ ಮುತವಲಿ, ಶಾರದಾ ಹಡಪದ ಜಗದೇವಿ ಎಮ್ಮೆನವರ, ಸಾವಿತ್ರಿ ದುರ್ಗ, ಮಹಾದೇವಿ ಪತ್ತಾರ, ಶ್ರೀದೇವಿ ಅಟಪಟಕರ, ಸವಿತಾ ದೈತನ, ವಿಜಯಲಕ್ಷ್ಮಿ ಸೇಜುಳೆ, ಶಾಂತಾಬಾಯಿ, ಬಿರಾದಾರ, ಶಿವಲೀಲಾ, ಬಾಳಿಕಾಯಿ, ಜಯಶ್ರೀ, ಪಾಟೀಲ ಸೇರಿದಂತೆ ಇತರರಿದ್ದರು.