ರಾಯಚೂರು : ಲಂಚ ಸ್ವೀಕರಿಸುವಾಗ ಗ್ರೇಡ್-೨ ತಹಸಿಲ್ದಾರ ಎಸಿಬಿ ಬಲೆಗೆ ಬಿದ್ದಿರುವ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ತಹಶಿಲ್ದಾರ ಕಚೇರಿಯಲ್ಲಿ ನಡೆದಿದೆ. ತಾಲೂಕಿನ ಶಾಖಾಪುರ ಗ್ರಾಮದ ಬಂಡೇಶ ಎಂಬುವವರು ಎಸಿಬಿ ಅಧಿಕಾರಿಗಳ ಕಛೇರಿಗೆ ದೂರು ನೀಡಿದ್ದರು. ಅದರ ಬೆನ್ನಲ್ಲೇ ಗ್ರೇಡ್-೨ ತಹಸಿಲ್ದಾರ ಪಿ.ಪರಶುರಾಮ ಅವರು ಭೂ-ಹಿಡುವಳಿ ಮತ್ತು ಗೇಣಿ ಪ್ರಮಾಣ ಪತ್ರಗಳನ್ನು ನೀಡಲು 4 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ದೂರು ನೀಡಿದ್ದರು.
ದೂರು ಆಧರಿಸಿ ಎಸಿಬಿ ಅಧಿಕಾರಿ ನ್ಯಾಮೆಗೌಡ ಬಳ್ಳಾರಿ ಅವರ ಮಾರ್ಗದರ್ಶನದಲ್ಲಿ ಸಿರವಾರ ತಹಸಿಲ್ದಾರ ಕಾರ್ಯಾಲಯದ ಮೇಲೆ ದಾಳಿ ನಡೆಸಿ, ಪಿ.ಪರಶುರಾಮ ಅವರು ಅರ್ಜಿದಾರರಿಂದ ಲಂಚ ಸ್ವೀಕರಿಸುವಾಗ ನೇರವಾಗಿ ದಾಳಿ ಮಾಡಿ ವಶಕ್ಕೆ ಪಡೆಯಲಾಗಿದೆ. ಇನ್ನು ದಾಳಿಯ ವೇಳೆ ಹಣ ಮತ್ತು ಆರೋಪಿಯನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಎಸಿಬಿಯ ಅಧಿಕಾರಿಗಳಾದ ಡಿ ಎಸ್ ಪಿ ವಿಜಯ ಕುಮಾರ್, ಹುಸೇನ್ ಸಾಬ್, ಅಶೋಕ್ ಬಸವರಾಜೇಶ್ವರ್ ಒಳಗೊಂಡ ACB ತಂಡದಿಂದ ಕಾರ್ಯಾಚರಣೆ ನಡೆದಿದೆ.