ಅಫಜಲಪುರ : ತಾಲೂಕಿನ ಕೋಗನೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕೋಗನೂರ ಗ್ರಾಮದಲ್ಲಿ ಹಳ್ಳ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಉದ್ಯೋಗ ಖಾತ್ರಿ ಯೋಜನೆ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಗ್ರಾಮ ಪಂಚಾಯತಿ ಸದಸ್ಯ ನಾಗೇಂದ್ರಪ್ಪ ಪೋಲಿಸ್ ಪಾಟೀಲ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ ಆರೋಗ್ಯವಾಗಿದ್ದವನೇ ನಿಜವಾದ ಶ್ರೀಮಂತ ಎಂಬ ಮಾತಿನಂತೆ ಎಲ್ಲಾ ಕೂಲಿಕಾರರು ತಮ್ಮ ಖಾಯಿಲೆಗಳನ್ನು ಪರಿಕ್ಷಿಸಿಕೊಂಡು ಹೆಚ್ಚಿನ ತೊಂದರೆಗಳಿದ್ದರು ವೈದ್ಯರ ಸಲಹೆ ಪಡೆದುಕೊಂಡು ಆರ್ಥಿಕವಾಗಿ ಮತ್ತು ಆರೋಗ್ಯವಾಗಿ ಸದೃಡರಾಗಬೇಕು. ಉದ್ಯೋಗ ಖಾತ್ರಿಯಲ್ಲಿ ಎಲ್ಲಾ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು ಈ ಸಂದರ್ಭದಲ್ಲಿ 150 ಜನ ಉದ್ಯೋಗ ಖಾತ್ರಿ ಯೋಜನೆ ಕೂಲಿ ಕಾರ್ಮಿಕರಿಗೆ ಬಿಪಿ, ಶುಗರ್, ತೂಕ ಪರೀಕ್ಷೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮಿ ಅಸ್ಠಗಿ ತಾಲೂಕು ಐಇಸಿ ಸಂಯೋಜಕಿ ಶೋಭಾ ಕಣಮಸ್ಕರ,,ಲಕ್ಷ್ಮಣ ಇಮ್ಮನ, ಸೂರ್ಯಕಾಂತ, ನಾಗೇಂದ್ರ ಮೇತ್ರೆ, ಮಲ್ಲೇಶಪ್ಪ ಮಾಂಗ CHO ಮಾಲಾಶ್ರೀ, ಜಮಾದಾರ,ಸೇರಿದಂತೆ ಆಶಾ ಕಾರ್ಯಕರ್ತೆಯರು ಗ್ರಾಮ ಪಂಚಾಯತಿ ಸಿಬ್ಬಂದಿಗಳಿದ್ದರು.
ವರದಿ : ಉಮೇಶ್ ಅಚಲೇರಿ, ವೈಸ್ ಆಪ್ ಜನತಾ ಕಲ್ಬುರ್ಗಿ ಜಿಲ್ಲೆ