ಲಿಂಗಸೂಗೂರು: ಜನನಿಬಿಡ ಪ್ರದೇಶದ ಮರವೊಂದರ ಕೆಳಗೆ ಇಸ್ಪೀಟ್ ಆಡುತ್ತಿದ್ದ ಗ್ಯಾಂಗ್ ಮೇಲೆ ಪೊಲೀಸರು ದಾಳಿ ನಡೆಸಿ ₹ 8400 ನಗದು ವಶಪಡಿಸಿಕೊಂಡಿರುವ ಘಟನೆ ನಡೆದಿದೆ. ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಹೋಬಳಿ ವ್ಯಾಪ್ತಿಯ ಛತ್ತರ ಗ್ರಾಮದ ಗುಡ್ಡದ ಬಳಿ 5 ಜನರ ತಂಡ ಬೇವಿನ ಮರದ ಕೆಳಗೆ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದರು. ಖಚಿತ ಮಾಹಿತಿ ಮೇರೆಗೆ ಮುದಗಲ್ ಪಿಎಸ್ಐ ಪ್ರಕಾಶ್ ರೆಡ್ಡಿ ಡಂಬಳ್ ಹಾಗೂ ಸಿಬ್ಬಂದಿಗಳು ದಾಳಿ ಮಾಡಿ 8400 ರೂ. ಹಾಗೂ ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಜೂಜಾಟದಲ್ಲಿ ತೊಡಗಿದ್ದ ಪರಶುರಾಮ ಎನ್ನುವ ಆರೋಪಿ ಪರಾರಿಯಾಗಿದ್ದು, ವಿರುಪಣ್ಣ, ನಾಗರಾಜ, ರಾಮಗೌಡ, ಮುದೆಪ್ಪ ಎನ್ನುವ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.