ಇಂಡಿ : ಭೀಮಾತೀರದಲ್ಲಿ ಪ್ರತ್ಯೇಕ ಎರಡು ಪ್ರಕರಣದಲ್ಲಿ ಇಬ್ಬರು ಮಹಿಳೆಯರು ನಾಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ನಡೆದಿದೆ.
ಲಾಳಸಂಗಿ ಗ್ರಾಮದ ಕಲ್ಲವ್ವ ಯಲ್ಲಪ್ಪ ಪಡನೂರ ನಾಪತ್ತೆಯಾಗಿರುವ ಗೃಹಿಣಿ. ಇನ್ನು ಮನೆಯಿಂದ ಹೊರಗಡೆಗೆ ಹೋಗಿದ್ದ ಕಲ್ಲವ್ವ ಕಾಣೆಯಾಗಿದ್ದಾಳೆ. ಈ ಬಗ್ಗೆ ಸುತ್ತಮುತ್ತಲಿನ ಕಡೆಗೆ ವಿಚಾರಿಸಿದ್ರೂ ಮಾಹಿತಿ ಲಭ್ಯವಾಗಿಲ್ಲ.
ಅಲ್ಲದೇ, ಮತ್ತೊಂದೆಡೆ ಹಂಜಗಿ ಗ್ರಾಮದಿಂದ
ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಹೋಗಿದ್ದ ತಾಯಿ, ಮಗು ನಾಪತ್ತೆಯಾಗಿದ್ದು, ಪುಟ್ಟಕ್ಕ ಶಿವಪುತ್ರ ರಣಸಿಂಗ ಕಾಣೆಯಾಗಿದ್ದಾಳೆ. ಇನ್ನು ತನ್ನ ಮೂರು ವರ್ಷದ ಮಗುವನ್ನು ಎತ್ತಿಕೊಂಡು ಆಸ್ಪತ್ರೆಗೆ ಹೋಗುತ್ತೇನೆ ಎಂದು ಹೋಗಿದ್ದ ಪುಟ್ಟಕ್ಕ ಕಾಣೆಯಾಗಿದ್ದಾಳೆ. ಈ ಕುರಿತು ಇಂಡಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.