ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಯಿಯವರ ಅಧಿಕೃತ ನಿವಾಸದಲ್ಲಿ ಈಶ್ವರಪ್ಪ ಭೇಟಿಯಾಗಿ ರಾಜೀನಾಮೆ ಪತ್ರವನ್ನು ಸಲ್ಲಿಕೆ ಮಾಡಿದ್ದಾರೆ. ಸಿಎಂಗೆ ಸಚಿವ ಈಶ್ವರಪ್ಪ ಒಂದು ಸಾಲಿನಲ್ಲಿ ರಾಜೀನಾಮೆ ಪತ್ರ ಸಿಎಂಗೆ ಸಲ್ಲಿಸಿದ್ದಾರೆ. ನಾನು ಸ್ವಇಚ್ಚೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೆನೆ ಎಂದು ಪತ್ರ ಬರೆದಿದ್ದಾರೆ.
ಸಂತೋಷ್ ಕುಟುಂಬಸ್ಥರು ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿದ್ರು. ಅಲ್ಲದೆ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ರಾಜೀನಾಮೆ ಹಿನ್ನಲೆಯಲ್ಲಿ ಸಿಎಂ ನಿವಾಸದೆದುರು ಈಶ್ವರಪ್ಪ ಬೆಂಬಲಿಗರಿಂದ ಪ್ರತಿಭಟನೆ ನಡೆಸಿದ್ದಾರೆ. ಇನ್ನು ಡಿಕೆಶಿ ವಿರುದ್ಧ ಬೆಂಬಲಿಗರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.