ವಿಜಯಪುರ: ಜಿಲ್ಲಾ ಆರೋಗ್ಯ ಇಲಾಖೆಯ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದ ಪ್ರಾಂಶುಪಾಲರು ನಿಮಯ ಬಾಹಿರ ಚಟುಚಟಿಕೆ ನಡೆಸಿದ ಘಟನೆ ತಡವಾಗಿ ವಿಜಯಪುರದಲ್ಲಿ ಬೆಳಕಿಗೆ ಬಂದಿದೆ.
ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಸರೋಜಾ ವಿಜಯಪುರ ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ ತರಬೇತಿ ಕೇಂದ್ರದಲ್ಲಿ ಯಡವಟ್ಟು ಮಾಡಿದ್ದಾರೆ. 2021 ಏಪ್ರೀಲ್ ನಲ್ಲಿ ಡ್ಯಾನ್ಸ್ ವಿಡಿಯೋ ಇದೀಗ ವೈರಲ್ ಆಗಿದ್ದು, ಚಲನಚಿತ್ರ ಗೀತೆಗೆ ಪವನ ಎಂಬ ಯುವಕನೊಂದಿಗೆ ಸರೋಜಾ ಹೆಜ್ಜೆ ಹಾಕಿದ್ದಾರೆ.
ನಿಯಮಗಳ ಪ್ರಕಾರ ತರಬೇತಿ ಕೇಂದ್ರದೊಳಗೆ ಪುರುಷರ ಪ್ರವೇಶಕ್ಕೆ ನಿಷೇಧವಿದೆ. ಪುರುಷರಿಗೆ ತರಬೇತಿ ಕೇಂದ್ರದಲ್ಲಿ ಪ್ರವೇಶಕ್ಕೆ ಅವಕಾಶ ನೀಡಬಾರದು.
ಆದರೂ ತರಬೇತಿ ಕೇಂದ್ರದಲ್ಲಿ ಯುವಕನನ್ನು ಕರೆದುಕೊಂಡು ಹೋಗಿ ಸರೋಜಾ ಕುಣಿದು ಕುಪ್ಪಳಿಸಿದ್ದಾರೆ. ವಿದ್ಯಾರ್ಥಿಗಳ ಎದುರು ಡ್ಯಾನ್ಸ್ ಹೊಡೆದು ಕರ್ತವ್ಯ ಲೋಪ ಎಸಗಿದ್ದಾರೆ. ಸರೋಜಾರ ಈ ಅಸಭ್ಯ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡೆಸುತ್ತಿದ್ದಾರೆ.
ಪ್ರಾಂಶುಪಾಲರಾದ ಸರೋಜಾ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.