ಇಂಡಿ : ಹೊಸ ನಾಗರಿಕತೆಯಲ್ಲಿ ಕಾಡು ಜನರ ಪಾಡು ನಮ್ಮ ದಾಗಿದೆ. ಬಿಜೆಪಿ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ತಳವಾರ ಸಮುದಾಯದ ಜನರಿಗೆ ಇಲ್ಲಿಯವರೆಗೆ ಪರಿಶಿಷ್ಟ ಪಂಗಡದ ಜಾತಿ ಪತ್ರ ಸಿಕ್ಕಿಲ್ಲ. ಕೇವಲ ಭರವಸೆ ಕೊಡುತ್ತಾ ತಳವಾರ ಸಮುದಾಯಕ್ಕೆ ಮುಗಿಗೆ ತುಪ್ಪ ಹಚ್ಚುವ ಕೆಲಸ ಮಾಡಿದೆ. ಆದರೆ ಇಲ್ಲಿಯವರೆಗೆ ಕುಂಟ ನೆಪ ಹೇಳುತ್ತಲೇ ಬಂದಿದ್ದಾರೆ.
ಅದಕ್ಕಾಗಿ ಏ 18ಕ್ಕೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಸರ್ಕಾರದ ವಿರುದ್ದ ಕಾಡುವೇಶ ಧರಸಿ ಮತ್ತು ಅರೆ ಬೆತ್ತಲೆ ಪ್ರತಿಭಟನೆ ಶಿವಾಜಿ ಮೇಟಗಾರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.
ಆ ಕಾರಣಕ್ಕಾಗಿ ತಳವಾರ ಸಮುದಾಯದ ಎಲ್ಲಾ ಜನರು ನಮ್ಮ ಹಕ್ಕಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ತಾವುಲ್ಲರೂ ಭಾಗವಹಿಸಬೇಕೆಂದು ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ತಳವಾರ ಸಮುದಾಯ ಮುಖಂಡರು ಕಾಡುವೇಶ ಧರಸಿ ವಿನಂತಿ ಮಾಡಿಕೊಂಡರು. ಇನ್ನೂ
ಎಸ್ ಟಿ ಪ್ರಮಾಣಪತ್ರ ಕೊಡುವವರೆಗೂ ಹೋರಾಟ ಮುಂದುವರೆಸುತ್ತೇವೆ ಎಂದು ಅಸಮಾಧಾನ ಹೊರ ಹಾಕುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ತಳವಾರ, ರಾಮಣ್ಣ ತಳವಾರ , ಶ್ರೀಮಂತ ವಾಲಿಕಾರ, ಬಸವರಾಜ ತಳವಾರ, ರಮೇಶ ತಳವಾರ, ಚಿದಾನಂದ ತಳವಾರ, ರೇವಣಸಿದ್ದ ತಳವಾರ, ಮಲ್ಲಿಕಾರ್ಜುನ, ವಿಠ್ಠಲ, ಗಣೇಶ, ಯಲ್ಲಾಲಿಂಗ್, ಮಳಸಿದ್ದ ತಳವಾರ ಉಪಸ್ಥಿತರು.