VOJ ನ್ಯೂಸ್ ಡೆಸ್ಕ್: ರಾಕಿಬಾಯ್ ಯಶ್ ನಟನೆಯ ಪ್ರಶಾಂತ್ ನೀಲ್ ನಿರ್ಧೇಶನದ KGF-2 ವಿಶ್ವದಾದ್ಯಂತ ಹತ್ತುಸಾವಿರ ಸ್ಕ್ರೀನ್ಗಳಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ದೇಶದ್ಯಂತ ಕೆಜಿಎಫ್-2 ಮಧ್ಯರಾತ್ರಿಯಿಂದ ಬಿಡುಗಡೆಗೊಂಡು ಪ್ರೇಕ್ಷಕರನ್ನು ಫೀದಾ ಮಾಡಿದೆ. ಕೆಜಿಎಫ್-2 ನ ವಿಶೇಷ ಹಾಡಿಗೆ ಥಿಯೇಟರ್ಗಳಲ್ಲಿ ಅಭಿಮಾನಿಗಳು ಹುಚ್ವೆದ್ದು ಕುಣಿದಿದ್ದಾರೆ. ಈಗಾಗಲೇ ಕೆಜಿಎಫ್-2 ಕನ್ನಡದಲ್ಲಿ 7.60 ಕೋಟಿ, ಹಿಂದಿಯಲ್ಲಿ 50 ಕೋಟಿ, ತಮಿಳಿನಲ್ಲಿ 2.40 ಕೋಟಿ, ಮಲಯಾಳಂನಲ್ಲಿ 2.10, ತೆಲುಗಿನಲ್ಲಿ 20 ಲಕ್ಷ ರೂ. ತನ್ನದಾಗಿಸಿಕೊಂಡಿದೆ.