ಸಿಂದಗಿ : ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿಗಳ ಗೃಹ ಕಛೇರಿಯಲ್ಲಿ ಚರ್ಚಿಸಿ ತಳವಾರ ಸಮುದಾಯಕ್ಕೆ ಪಶಿಷ್ಟ ಪಂಗಡ ಪ್ರಮಾಣ ಪತ್ರ ನೀಡುವುದಾಗಿ ಭರವಸೆ ನೀಡಿದ್ದರು, ಇಂದು ಮಾತಿಗೆ ತಪ್ಪಿದ್ದಾರೆ.
ಅದಕ್ಕೆ ಬೊಮ್ಮಾಯಿ ಸರ್ಕಾರದ ವಿರುದ್ಧ ಏ. 18 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ತಳವಾರ ಪರಿವಾರ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಶಿವಾಜಿ ಮೆಟಗಾರ ಹೇಳಿದರು. ಸಿಂದಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು, ಅಜಾದಿ ಅಮೃತಮಹೋತ್ಸವ ದೇಶ ಆಚರಿಸುತ್ತಿದ್ದರೂ ತಳವಾರ ಸಮುದಾಯಕ್ಕೆ ಮೀಸಲಾತಿಯ ಅಮೃತ ಸಂಜೀವಿನಿ ಸಿಗುವ ಬದಲು ರಾಜಕಾರಣಿಗಳಿಂದ ಕಾರ್ಕೊಟಕ ಹಾಲಾಹಲ ವಿಷಸಿಗುತ್ತಿದೆ. ಆ ಕಾರಣಕ್ಕಾಗಿ ಕಾಡು ವೇಷ ಧರಿಸಿ ಎಮ್ಮೆಯ ಮೇಲೆ ಕುಳಿತು ಎಮ್ಮೆಯ ಚರ್ಮದಂತೆ ದಪ್ಪ ಇರುವ ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು. ಬಹುತೇಕವಾಗಿ ಅರಬೆತ್ತಲೆಯಿಂದ ಹೋರಾಟದಲ್ಲಿ ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ವೈ ಸಿ ಮಯೂರ, ಟಿಪ್ಪು ಕ್ರಾಂತಿ ಸೇನೆ ಅಧ್ಯಕ್ಷ ದಸ್ತಗಿರಿ ಮುಲ್ಲಾ, ಕುರುಬರ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ನಿಂಗಣ್ಣ ಬಿರಾದಾರ ಉಪಸ್ಥಿತರು.