ಇಂಡಿ : ಆಕಸ್ಮಿಕವಾಗಿ ಗುಡಿಸಲಕ್ಕೆ ಬೆಂಕಿ ತಗುಲಿ ಗುಡಿಸಿಲು ಭಸ್ಮವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ನಡೆದಿದೆ. ಶಶಿಕಲಾ ಈರಪ್ಪ ಅಳ್ಳೊಳ್ಳಿ ಸೇರಿದ ಗುಡಿಸಿಲು ಭಸ್ಮವಾಗಿದೆ. ಬೆಂಕಿ ಕೆನ್ನಾಲಿಗೆ ಗುಡಿಸಿಲಿನಲ್ಲಿ ಇದ್ದ ಸುಮಾರು ಎರಡು ಚೀಲ ಜೋಳ, ಮೂರು ಚೀಲ ಗೋದಿ, ಎರಡು ತೊಲೆ ಬಂಗಾರ, ಮನೆಯಲ್ಲಿ ಇದ್ದ ಟಿವಿ ಹಾಗೂ ಗೃಹ ಉಪಯೋಗಿ ಸಾಮಾಗ್ರಿಗಳು ಸುಟ್ಟು ಕರಗಲಾಗಿವೆ. ಹೋರ್ತಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.