ಸಿಂಧನೂರು: ಅಕ್ರಮ ಮರಳು ದಂಧೆ ನಡೆಯಲು ಪ್ರತ್ಯಕ್ಷವಾಗಿ ಬೆಂಬಲಿಸುತ್ತಿರುವ ಅಧಿಕಾರಿಗಳ ವಿರುದ್ಧ ತನಿಖಾ ಆಯೋಗ ರಚನೆ ಮಾಡಿ ಅಕ್ರಮ ಮರಳು ಮಾಫಿಯಾವನ್ನು ಮಟ್ಟ ಹಾಕಬೇಕಾಗಿದೆ ಎಂದುಸಿಪಿಐಎಂಎಲ್ ರಾಜ್ಯ ಸಮಿತಿ ಸದಸ್ಯ ಎಂ.ಗಂಗಾಧರ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿದ ಅವರು ಸಿಂಧನೂರು ತಾಲೂಕಿನ ಕೆಂಗಲ್, ಅಲಬನೂರು, ಗಿಣಿವಾರ, ಒಳಬಳ್ಳಾರಿ ಗೋನವಾರ, ಮಾಡ ಸಿರವಾರ, ಸಿಂಗಾಪೂರ್, ಮುಕ್ಕುಂದ, ಆಯುನೂರು ಸೇರಿದಂತೆ ಇತರೆ ಭಾಗಗಳಲ್ಲಿ ಹಗಲು ರಾತ್ರಿ ಎನ್ನದೆ ರಾಜಾರೋಷವಾಗಿ ಅಕ್ರಮವಾಗಿ ಮರಳು
ಸಾಗಾಣಿಕೆ ಮಾಡುತ್ತಿದ್ದಾರೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಸಂಪೂರ್ಣ ಮೌನವಹಿಸಿರುವುದು ವಿಷಾಧನೀಯವಾಗಿದೆ.
ಈ ಮರಳು ದಂಧೆಯಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾದ ಸಂಬಂಧಿಸಿದ ಅಧಿಕಾರಿಗಳಿಗೆ ಮಾಮೂಲು ಕೊಡುತ್ತೇವೆ ಎಂದು ರಾಜಾರೋಷವಾಗಿ ಹೇಳುವ ಕೆಲವು ಮರಳು ದಂಧೆಕೋರರಿಗೆ ಯಾರ ಭಯವು ಇಲ್ಲದಾಗಿದೆ. ಕೂಡಲೇ ಇದರ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಗಣಿ ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸೂಕ್ತ ತನಿಖೆಗಾಗಿ ತಂಡ ರಚನೆ ಮಾಡಬೇಕೆಂದು ಸಿಪಿಐ(ಎಂಎಲ್)ರಾಜ್ಯ ಸಮಿತಿ ಕರ್ನಾಟಕ ಆಗ್ರಹಿಸುತ್ತದೆ ಎಂದು ತಿಳಿಸಿದ್ದಾರೆ.