ಇಂಡಿ : ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಬಾಳೆ ಗಿಡಗಳು, ಟೊಮ್ಯಾಟೊ ಹಾನಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಪಡನೂರ ಗ್ರಾಮದಲ್ಲಿ ನಡೆದಿದೆ. ಸೈಫನ್‌ಸಾಬ್ ಹುಸೇನಿ ಇಂಡಿ ಎಂಬುವವರ ತೋಟದಲ್ಲಿ ಬೆಳೆದ ಟೊಮ್ಯಾಟೊ, ಬಾಳೆ ಹಣ್ಣು ನಾಶವಾಗಿವೆ. ಇದರಿಂದ ಕೈಗೆ ಬಂದಂತಹ ತುತ್ತು ಬಾಯಿಗೆ ಬರದಂತಹ ಪರಿಸ್ಥಿತಿ ಆಗಿದೆ. ಅಲ್ಲದೇ, ಕಳೆದ ಬಾರಿಯ ಕೋವಿಡ್ ಸಂದರ್ಭದಲ್ಲೂ ಇದೇ ತರಹ ವ್ಯಾಪಾರ ಇಲ್ಲದೇ ಲಕ್ಷಾಂತರ ಮೌಲ್ಯದ ಟೊಮ್ಯಾಟೊ, ಬಾಳೆಹಣ್ಣು ನಷ್ಟ ಆಗಿದೆ. ಈ ಬಾರಿ ಮಳೆಯಿಂದಾಗಿ ಬೆಳೆಗಳು ನಾಶವಾಗಿದೆ. ಅದಕ್ಕಾಗಿ ಸರ್ಕಾರ ನಮ್ಗೆ ಪ್ರಕೃತಿ ವಿಕೋಪದಡಿಯಲ್ಲಿ ಪರಿಹಾರ ವಿತರಣೆ ಮಾಡಬೇಕು. ಇಲ್ಲದೇ ಹೋದ್ರೇ ನಮ್ಮ ಜೀವನ ಬೀದಿಗೆ ಬರುತ್ತದೆ ಎಂದು ರೈತ ಇಂಡಿ ಮನವಿ ಮಾಡಿದರು.