ಲಿಂಗಸೂಗೂರು: ಕೆನಾಲ್ ನಲ್ಲಿ ಬಟ್ಟೆ ತೊಳೆಯುತ್ತಿದ್ದ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿ ಮಹಿಳೆಯರಿಂದ ಯುವಕನೋರ್ವ ಗೂಸಾ ತಿಂದ ಘಟನೆ ನಡೆದಿದೆ.
ಲಿಂಗಸೂಗೂರು ಪಟ್ಟಣದ ಏಳನೇ ವಾರ್ಡ್ ಬಳಿ ಇರುವ ಕೆನಾಲ್ ನಲ್ಲಿ ದಿನನಿತ್ಯ ಮಹಿಳೆಯರು ಬಟ್ಟೆ ತೊಳೆಯಲು ಹೋಗುತ್ತಾರೆ. ಬಟ್ಟೆ ತೊಳೆಯುವ ಮಹಿಳೆಯರ ಮುಂದೆ ಯುವಕ ಅರೆ ನಗ್ನ ಸ್ಥಿತಿಯಲ್ಲಿ ಸ್ನಾನ ಮಾಡಿ ಖುಷಿ ಪಡುತ್ತಿದ್ದ ಎನ್ನಲಾಗುತ್ತಿದೆ. ಈಗಾಗಲೇ ಎರಡು ಮೂರು ಬಾರಿ ಮಹಿಳೆಯರು ಯುವಕನಿಗೆ ಎಚ್ಚರಿಕೆಯನ್ನು ನೀಡಿದ್ದರು. ಎಚ್ವೆತ್ತುಕೊಳ್ಳದ ಯುವಕ ತನ್ನ ಹಳೆ ಚಾಳಿಯನ್ನು ಮುಂದುವರೆಸಿದ್ದಾನೆ.
ಕೊನೆಗೆ ಮಹಿಳೆಯರೆಲ್ಲರೂ ಸೇರಿ ಯುವಕನಿಗೆ ಗೂಸಾ ಕೊಟ್ಟ ನಂತರ ನನ್ನಿಂದ ತಪ್ಪಾಗಿದೆ ಬಿಟ್ಟುಬಿಡಿ ಎಂದು ಯುವಕ ಮಹಿಳೆಯರ ಕಾಲು ಹಿಡಿದು ಕ್ಷೇಮೆ ಕೇಳಿದ್ದಾನೆ.