ಇಂಡಿ : ಬೈಕ್ ಹಾಗೂ ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿರುವ ಪರಿಣಾಮ ಬೈಕ್ ಸವಾರನ ಎರಡು ಕಾಲು ಕಟ್ ಆಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ. ರೋಡಗಿ ನಿವಾಸಿ ಹುಚ್ಚಪ್ಪ ಬಸವರಾಜ ಹಾದಿಮನಿ ವಯಾ ೨೦ ಗಾಯಗೊಂಡಿರುವ ಸವಾರ. ಇನ್ನು ಘಟನೆ ಬಳಿಕ ಲಾರಿ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಇನ್ನು ಅಪಘಾತದ ಬಳಿಕ ಆ್ಯಂಬುಲೈನ್ಸ್ ಬರದ ಹಿನ್ನಲೆ ಟಂಟಂ ವಾಹನದಲ್ಲಿ ಗಾಯಗೊಂಡಿರುವ ಯುವಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಂಡಿ ಶಹರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.