ಲಿಂಗಸೂಗೂರು: ಕಳೆದೆರಡು ವರ್ಷಗಳಿಂದ ಕಳೆ ಗುಂದಿದ್ದ ಹಬ್ಬಗಳು ಈ ಬಾರಿ ಅದ್ದೂರಿಯಾಗಿ ಆಚರಣೆಯಾಗಿವೆ.
ವಿಶೇಷವಾಗಿ ಯುಗಾದಿ ಹಬ್ಬ ಗ್ರಾಮಿಣ ಭಾಗದಲ್ಲಿ ಬೇವು ಬೆಲ್ಲ ಸವಿಯುವ ಮೂಲಕ, ಯುಗಾದಿ ಬಲಿ ಪಾಡ್ಯಮಿಯ ನಂತರದ ದಿನ ಹಿಂದೂ ಮುಸ್ಲಿಂ
ಎನ್ನುವ ಭೇಧ ಭಾವ ಮರೆತು ಯುವಕರು ಬಣ್ಣ ಆಡುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾದರು.
ಇನ್ನು ಈಚನಾಳ ಗ್ರಾಮದಲ್ಲಿ ಬಣ್ಣ ತುಂಬಿದ ಮಣ್ಣಿನ ಗಡಿಗೆಯನ್ನ ಅಗಸಿಯ ಬಾಗಿಲಿಗೆ ಕಟ್ಟಿ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹೊಡೆಯುವ ಸ್ಪರ್ಧೆ ಏರ್ಪಡಿಸಿ, ಯುವಕರು ಅದ್ದೂರಿಯಾಗಿ ಹಬ್ಬದ ಸಂಭ್ರಮಾಚರಣೆ ಮಾಡಿದರು.