ವಿಜಯಪುರ: ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮರಾಠಿ ಹಾಡಿಗೆ ನೃತ್ಯ ಮಾಡಿದ ಘಟನೆಗೆ ಜಿಲ್ಲಾ ಕಸಪಾ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರಗೆ ಕಾರಣ ಕೇಳಿ ನೋಟೀಸ್ ಜಾರಿಗೆ ಮಾಡಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ, ನಾಡೋಜ ಮಹೇಶ ಜೋಶಿ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದಾರೆ. ವೇದಿಕೆ ಮೇಲೆ ಕುಳಿತವರ ಸಮ್ಮುಖದಲ್ಲೇ ನೃತ್ಯ ಪ್ರದರ್ಶನ ನಡೆದಿದೆ. ಆದರೆ ಅಲ್ಲಿದ್ದ ಯಾವ ಗಣ್ಯ ವ್ಯಕ್ತಿಯೂ ಇದನ್ನು ಪ್ರತಿಭಟಿಸದೆ ಕುಳಿತಿರುವುದು ಕಾಣುತ್ತದೆ. ತಮ್ಮ ಈ ಬೇಜವಾಬ್ದಾರಿಯಿಂದ ಕಸಾಪಕ್ಕೆ ಮುಜುಗರ ಉಂಟು ಮಾಡಿದೆ. ಅದಕ್ಕಾಗಿ ತಕ್ಷಣವೇ ಉತ್ತರ ನೀಡುವಂತೆ ವಾಲೀಕಾರ್‌ಗೆ ನೋಟೀಸ್ ನೀಡಿದ್ದಾರೆ.