ಇಂಡಿ : ಜನ-ಜಾನುವಾರುಗಳಿಗೆ ಮುಂದಿನ ಬೇಸಿಗೆಯಲ್ಲಿ ನೀರಿನ ತೊಂದರೆಯಾಗುತ್ತಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ್ ಸದನದಲ್ಲಿ ಗಮನ ಸಳೆದರು. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಇಂಡಿ ಶಾಖಾ ಕಾಲುವೆಗೆ ನೀರು ಹರಿಸುವಂತೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಆಗ್ರಹಿಸಿದ್ದಾರೆ. ಇನ್ನು ಮಾರ್ಚ್ 14 ರಿಂದ 21 ರವರೆಗಿನ ಸುಮಾರು 2500 ಕ್ಯೂಸೆಕ್ಸ್ ಹರಿಯಬೇಕಾಗಿತ್ತು. ಕೇವಲ 1000 ರಿಂದ 1500 ಕ್ಯೂಸೆಕ್ಸ್ ಮಾತ್ರ ಹರಿದು ಬಿಡಲಾಗಿದೆ. ಇದರಿಂದ ಸಿಂದಗಿ, ಇಂಡಿ, ಚಡಚಣ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಗ್ರಾಮೀಣಾ ಭಾಗದ ಹಾಗೂ ಸಿಂದಗಿ ಮತ್ತು ಇಂಡಿ ಪಟ್ಟಣದ ಜನರಿಗೆ ಬಹುಹಳ್ಳಿಗಳ ಮೂಲಕ ಕೆರೆಗಳು ತುಂಬಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೇ, ಜನ-ಜಾನುವಾರುಗಳಿಗೆ ಮುಂದಿನ ಬೇಸಿಗೆಯಲ್ಲಿ ನೀರಿನ ತೊಂದರೆಯಾಗುತ್ತಿದೆ. ಆದ್ದರಿಂದ ಇಂಡಿ ಶಾಖಾ ಕಾಲುವೆಗೆ ಬರಬೇಕಾದ ನೀರನ್ನು ಏಪ್ರಿಲ್ 4 ರಿಂದ 10ರ ವರೆಗೂ IBC ಕಾಲುವೆಗೆ ನೀರು ಹರಿದು ಬಿಡಬೇಕು ಎಂದು ಮನವಿ ಮಾಡಿದ್ದಾರೆ.