ಮಸ್ಕಿ: ಪ್ರೀತಿ ವಿಚಾರಕ್ಕೆ ಕೊಲೆಮಾಡಿದ ಸ್ಥಳದಲ್ಲಿಯೇ ಕೊಲೆಗಾರನ ಶವ ಪತ್ತೆಯಾದ ಘಟನೆ ಮಸ್ಕಿ ಪಟ್ಟಣದಲ್ಲಿ ನಡೆದಿದೆ. ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದಲ್ಲಿ ನಡೆದಿದ್ದ ಘಟನೆಗೆ ಸಂಬಂದಿಸಿದಂತೆ ಇದಿಗ ಮತ್ತೊಂದು ಶವ ಪತ್ತೆಯಾಗಿದೆ. ಇದೇ ಫೆಬ್ರವರಿ 25 ರಂದು ನಡೆದಿದ್ದ ಭೂಮಿಕಾ(15) ಕೊಲೆಯಾಗಿದ್ದ ವಿದ್ಯಾರ್ಥಿನಿ. ಭೂಮಿಕಾಳನ್ನು ಕೊಲೆಗೈದಿದ್ದ ಸೋದರ ಮಾವನ ಮಗ ರಮೇಶ ಮಸ್ಕಿ ಪಟ್ಟಣದ ಸಾನಬಾಳ ರಸ್ತೆಯ ಪೊದೆಯಲ್ಲಿ ಭೂಮಿಕಾ ಕೊಲೆ ನಡೆದಿತ್ತು. ಇದೀಗ ಅದೇ ಜಾಗದ ಪಕ್ಕದ ಪೊದೆಯಲ್ಲಿ ರಮೇಶ್ ಶವ ಪತ್ತೆಯಾಗಿದೆ. ಪೊದೆಯಲ್ಲಿದ್ದ ಮೃತದೇಹವನ್ನು ನಾಯಿಗಳು ಒರಗೆ ಎಳೆದು ತಂದಿವೆ ಎನ್ನಲಾಗುತ್ತಿದೆ. ಘಟನೆ ಬಗ್ಗೆ ಪೊಲೀಸರಿಗೆ ಕುರಿಗಾಯಿಗಳು ಮಾಹಿತಿ ನೀಡಿದ್ದಾರೆ. ಕೊಲೆಯಾಗಿ 33 ದಿನಗಳ ಬಳಿಕ ರಮೇಶನ ಶವ ಪತ್ತೆಯಾಗಿದೆ. ಸ್ಥಳಕ್ಕೆ ದಾವಿಸಿದ ಮಸ್ಕಿ ಪೊಲೀಸರಿಂದ ಮೃತದೇಹ ಪರಿಶೀಲನೆ ಮಾಡಲಾಗುತ್ತಿದೆ.