ಇಂಡಿ : ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಬಾಕಿ ವೇತನ ಹಾಗೂ ವಿವಿಧ ಬೇಡಿಕೆಗಳು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ಸ ಶ್ರಯೋಭಿವೃದಿ ಸಂಘ, ಇಂಡಿ ಘಟಕ ಆಶ್ರಯದಲ್ಲಿ ತಾಲೂಕು ಪಂಚಾಯತ್ ಎದರು ಧರಣಿ ಸತ್ಯಾಗ್ರಹ ನಡೆಸಿದರು.
ಈ ಸಂದರ್ಭದಲ್ಲಿ ಇಂಡಿ ಘಟಕದ ಅಧ್ಯಕ್ಷ ಸಂತೋಷ ವಾಲಿಕಾರ ಮಾತಾನಾಡಿದ ಅವರು, ಅತ್ಯಂತ ಪ್ರಾಮಾಣಿಕತೆಯಿಂದ ಹಗಲಿರುಳು ಕೆಲಸ ನಿರ್ವಹಿಸುತ್ತಿರುವ ನಮಗೆ ವೇತನ ನೀಡಿಲ್ಲ. ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಕನಿಷ್ಠ ವೇತನವನೂ ಕೊಡಲು ಸರ್ಕಾರ ನೀಡಲು ಸತಾಯಿಸುತ್ತಿದೆ ಎಂದು ಆರೋಪಿಸಿದರು. ಅಲ್ಲದೇ, ಕಳೆದ ಹಲವು ತಿಂಗಳಿಂದ ಸಂಬಳವಿಲ್ಲದೆ ನೌಕರರು ಕಣ್ಣೀರಿಡುತ್ತಿದ್ದೇವೆ. ಹೀಗಾಗಿ ಗ್ರಾಮ ಪಂಚಾಯತಿ ನೌಕರರ ಜೀವನ ಶೋಚನೀಯವಾಗಿದೆ ಎಂದರು. ಅದಕ್ಕಾಗಿ ತಕ್ಷಣವೇ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ತುಕರಾಮ ಮಾರನೂರ, ಸುರೇಶ ಅಳ್ಳಿಮೊರೆ, ರವಿ ದೊಡಮನಿ, ಮಲ್ಲಿಕಾರ್ಜುನ ಇಂಗಳೆ, ಹಣಮಂತ ಸೊಡ್ಡಿ, ಅರವಿಂದ ದೊಡ್ಡಮನಿ, ಸಿದ್ದರಾಮ ಕೋಳಿ, ಶ್ಯಾಮರಾಯ ಪಾಟೀಲ್, ಅಶೋಕ ಹರಳಯ್ಯ ಇನ್ನೂ ಅನೇಕರು ಉಪಸ್ಥಿತರು.