ಚಡಚಣ : ಟಾಟಾ ಟಿಯಾಗೋ ಕಂಪನಿಯ ಕಾರ್ ಆಕಸ್ಮಿಕವಾಗಿ ಹೊತ್ತಿ ಉರಿದು ಭಸ್ಮವಾಗಿದೆ.
ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಏಳಗಿ ಪಿ.ಎಚ್. ಗ್ರಾಮದ ಬಳಿ ತೆಲಂಗಾಣ ಮೂಲದ ಕಾರು ಸುಟ್ಟು ಕರಕಲಾದ ಘಟನೆ ನಡೆದಿದೆ. ಕಾರಿನ ಎಂಜಿನ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಗಮನಕ್ಕೆ ಬರುತ್ತಿದಂತೆ ಕಾರನ್ನು ಸೈಡ್ ಗೆ ಮಾಲೀಕ ನಿಲ್ಲಿಸಿದ್ದಾನೆ. ಹೈದ್ರಾಬಾದ್ ದಿಂದ ವಿಜಯಪುರಕ್ಕೆ ಬರುತ್ತಿದ್ದ ಕುಟುಂಬಸ್ಥರು ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ. ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.