VOJ ನ್ಯೂಸ್ ಡೆಸ್ಕ್: ಪುಷ್ಪಾ ಸಿನೆಮಾ ಖ್ಯಾತಿಯ ಅಲ್ಲು ಅರ್ಜುನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದು ಪುಷ್ಪಾ ಸಿನೆಮಾಕ್ಕೆ ಸಂಬಂಧಿಸಿದ ವಿಷಯವಲ್ಲ. ಬದಲಾಗಿ ಅಲ್ಲು ಅರ್ಜುನ್ ಅವರ ವಿವಾಸಿ ರೇಂಜ್ ರೋವರ್ ಕಾರಿನಲ್ಲಿ ಟಿಂಟೆಡ್ ಗ್ಲಾಸ್ ಬಳಸಿದ್ದಕ್ಕೆ ಪ್ರಕರಣ ದಾಖಲಿಸಿಲಾಗಿದೆ. ಹೈದರಾಬಾದ್ನ ಬಂಜಾರ ಹಿಲ್ಸ್ ಪ್ರದೇಶದ ರೋಡ್ ನಂಬರ್ 36 ರಲ್ಲಿ ವಾಹನ ತಡೆಹಿಡಿದು ಪ್ರಕರಣ ದಾಖಲಿಸಲಾಗಿದೆ. ಇದೇ ವಿಷಯಕ್ಕೆ ನಟ ಕಲ್ಯಾಣ್ ರಾಮ್ ವಿರುದ್ದ ಕೂಡ ಪ್ರಕರಣ ದಾಖಲಿಸಲಾಗಿದೆ.