ಕಾಸರಗೋಡು: ಬೆಂಗಳೂರಿನ ಅಪಾರ್ಟ್ ಮೆಂಟ್ ವೊಂದರಲ್ಲಿ ನಿಗೂಢವಾಗಿ ಮೃತಪಟ್ಟಿರುವ ಪತ್ರಕರ್ತೆ ಕಾಸರಗೋಡಿನ ವಿದ್ಯಾನಗರ ಸಮೀಪದ ಚಾಲಾ ನಿವಾಸಿ ಎನ್ ಶ್ರುತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಬೇಕು ಎಂದು ಅವರ ಸಂಬಂಧಿಕರು ಆಗ್ರಹಿಸಿದ್ದಾರೆ.
ನಿವೃತ್ತ ಶಿಕ್ಷಕ ಪೆರಿಯ ನಾರಾಯಣನ್ ಮತ್ತು ಶಿಕ್ಷಕಿ ಸತ್ಯಭಾಮಾ ಅವರ ಪುತ್ರಿ ಶ್ರುತಿ ರಾಯಿಟರ್ಸ್ ಸುದ್ದಿ ಸಂಸ್ಥೆಯಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದರು.
2007 ರಲ್ಲಿ ಕಾಸರಗೋಡು ಸಮೀಪದ ತಳಿಪರಂಬ ನಿವಾಸಿ ಅನೀಶ್ ಜತೆ ಅವರ ಮದುವೆ ನೆರವೇರಿತ್ತು. ಅನೀಶ್ ಸಾಫ್ಟ್ ವೇರ್ ಇಂಜಿನಿಯರ್.
ಮದುವೆಯಾದ ಬಳಿಕ ಅನೀಶ್ ಶ್ರುತಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.
ಬೆಂಗಳೂರಿನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶ್ರುತಿ ಮೃತದೇಹ ಪತ್ತೆಯಾಗಿತ್ತು. ಪತಿ ಅನೀಶ್ ವಿರುದ್ಧ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.