ಬೆಂಗಳೂರು: ಕುರಿಗಾರರ ಮೇಲಿನ ದೌರ್ಜನ್ಯ ಖಂಡಿಸಿ ನಡೆದ ಹೋರಾಟದ ಕಾರ್ಯಕ್ರಮದಲ್ಲಿ ಸರ್ಕಾರದ ಪರವಾಗಿ ಆಗಮಿಸಿದ ಪೌರಾಡಳಿತ ಸಚಿವರಾದ ಎಂ ಟಿ ಬಿ ನಾಗರಾಜ್ ಅವರಿಗೆ ಸಿದ್ದರಾಮನಂದಪುರಿ ಸ್ವಾಮಿಗಳು, ಮಾಜಿ ಸಚಿವ ರೇವಣ್ಣ, ಅರವಿಂದ ದಳವಾಯಿ, ಪಂಡಿತ್ ರಾವ್ ಚಿದ್ರಿ, ಸಿದ್ದು ತೇಜ, ಬಿಎಂ ಪಾಟೀಲ್, ಪ್ರದೇಶ ಕುರುಬರ ಸಂಘದ ಅಧ್ಯಕ್ಷರಾದ ಟಿ ಬಿ ಬೆಳಗಾವ ಹಾಗೂ ವಿವಿಧ ಸಂಘಟನೆ ಮುಖಂಡರು ಭಾಗವಹಿಸಿ ಕುರಿಗಾರರ 13 ಸಮಸ್ಯೆಗಳನ್ನು ಹೋರಾಟ ಮುಖಾಂತರ ಮನವಿ ಸಲ್ಲಿಸಲಾಯಿತು.
ಮನವಿಗೆ ಸ್ಪಂದಿಸಿದ ಸಚಿವ ಎಂ ಟಿ ಬಿ ನಾಗರಾಜ್ ಅವರು ನಿಮ್ಮ ಬೇಡಿಕೆಗಳನ್ನು ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದರು. ಅದೇ ರೀತಿ ಕುರಿಗಾಯಿ ಮಹಿಳೆಗೆ 15 ಲಕ್ಷ ರೂ.ಗಳನ್ನು ಸರಕಾರದ ವತಿಯಿಂದ ನೀಡಿದ್ದಕ್ಕೆ ಸರ್ಕಾರಕ್ಕೆ ಅಭಿನಂದನೆಯನ್ನು ತಿಳಿಸಿದರು. ಇದೆ ಸಂದರ್ಭದಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಮರಣ ಹೊಂದಿದ ಕುರಿಗಾಹಿ ಕುಟುಂಬದವರಿಗೆ ಸಿದ್ದರಾಮನಂದಪುರಿ ಸ್ವಾಮಿಗಳ ನೇತೃತ್ವದಲ್ಲಿ ಸ್ವತಹ ಪೂಜ್ಯರು 2 ಲಕ್ಷ ರೂ. ಗಳನ್ನು ವೇದಿಕೆ ಮೇಲೆ ನೀಡಿದರು.
ಇನ್ನು ಎಂಟಿಬಿ ನಾಗರಾಜ ಅವರಿಗೆ ಸಮಸ್ತ ಕುರಿಗಾರರ ಪರವಾಗಿ ಅಭಿನಂದಿಸಲಾಯಿತು.
ಸಮಾಜದ ವಿಷಯ ಬಂದಾಗ ಪಕ್ಷಾತೀತವಾಗಿ ನಾನು ಹೋರಾಡಲು ಸಿದ್ಧ ಎಂದು ಕುರಿಗಾರರನ್ನು ಉದ್ದೇಶಿಸಿ ಎಂ.ಟಿ.ಬಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಿದ್ದರಾಮನಂದಪುರಿ ಸ್ವಾಮಿಗಳು ಮಾತನಾಡಿ ಯಾವುದೇ ಸರ್ಕಾರವಿರಲಿ ಪ್ರತಿವರ್ಷ ಫೆಬ್ರವರಿ 18 ಕುರಿಗಾಹಿ ಮಹಿಳೆಯನ್ನು ಅತ್ಯಾಚಾರ ಮಾಡಿ ಕೊಲೆಗೈದ ದಿನದಂದು ಪ್ರತಿವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಕುರಿಗಾರರನ್ನು ಸೇರಿಸಿ ಕುರಿಗಾರರ ಸಮಸ್ಯೆಗಳನ್ನು ಸರ್ಕಾರದ ಮುಂದೆ ಪ್ರತಿಭಟಿಸುವ ದಿನವನ್ನಾಗಿ ಆಚರಿಸೋಣ ಎಂದು ಕರೆ ನೀಡಿದರು.