ವಿಜಯಪುರ : ನಗರದಲ್ಲಿ ಜೇಮ್ಸ್ ಚಿತ್ರದ ಹಬ್ಬ ಆರಂಭವಾಗಿದೆ. ಇನ್ನು ನಗರದ ಡ್ರೀಮಲ್ಯಾಂಡ್ ಚಿತ್ರಮಂದಿರದಲ್ಲಿ ಅಭಿಮಾನಿಗಳ ಸಂಭ್ರಮಿಸುತ್ತಿದ್ದಾರೆ. ಪುನೀತ್ ಕಟೌಟ್ ಗೆ ಮಾಲಾರ್ಪನೆ, ಪುಷ್ಟಾರ್ಚನೆ ಹಾಗೂ ಹಾಲಿನ ಅಭಿಷೇಕ ಮಾಡಿದರು. ಇನ್ನೂ ಅಪ್ಪು ಅಭಿಮಾನಿಗಳು ಸಡಗರದಿಂದ ಪುನೀತ್ ಪೋಟೋ ಹಿಡಿದ ಘೋಷಣೆಗಳನ್ನು ಕೂಗಿದರು. ಈ ವೇಳೆಯಲ್ಲಿ ನೂರಾರು ಅಭಿಮಾನಿಗಳು ಕನ್ನಡ ಧ್ವಜ ಹಿಡಿದುಕೊಂಡು ಡ್ಯಾನ್ಸ್ ಮಾಡಿದರು.
ಜೇಮ್ಸ್ ಚಿತ್ರ ಬಿಡುಗಡೆ ಹಿನ್ನಲೆ ನಗರದ ಡ್ರೀಮಲ್ಯಾಂಡ ಚಿತ್ರಮಂದಿರದ ಆವರಣದಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿದೆ. ಇನ್ನು ಪುನೀತ್ ರಾಜಕುಮಾರ ಅಭಿಮಾನಿಗಳ ಸಂಘ, ಬಿಎಲ್ಡಿಇ ಮೆಡಿಕಲ್ ಕಾಲೇಜು ಹಾಗೂ ಹಾಸ್ಪಿಟಲ್, ಯತ್ನಾಳ್ ಅಭಿಮಾನಿಗಳ ಸಂಘ ನೇತೃತ್ವ ರಕ್ತದಾನ ಶಿಬಿರ ನಡೆಯಿತು. ಅಲ್ಲದೇ ರಕ್ತದಾನ ಶಿಬಿರದಲ್ಲಿ ನೂರಾರು ಅಪ್ಪು ಅಭಿಮಾನಿಗಳು ರಕ್ತದಾನ ಮಾಡಿದರು. ಅಲ್ಲದೇ, ರಕ್ತದಾನ ಮಡಲು ಅಪ್ಪು ಅಭಿಮಾನಿಗಳು ಆಗಮಿಸುತ್ತಿದ್ದಾರೆ.